ಹುಬ್ಬಳ್ಳಿ:ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಅಂದರೆ ಸಾಕಷ್ಟು ಜನರಿಗೆ ಮರು ಜೀವವನ್ನು ನೀಡಿರುವ ಸಂಜೀವಿನಿ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದ ಕಿಮ್ಸ್ ಸುಮಾರು 365ಕ್ಕೂ ಹೆಚ್ಚು ಕೋವಿಡ್ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ ಮಾಡಿಸಿದೆ.
ಈ ಹಿನ್ನೆಲೆಯಲ್ಲಿ ಸಾಕಷ್ಟು ಸೇವೆಯಿಂದ ಗುರುತಿಸಿಕೊಂಡಿರುವ ಕಿಮ್ಸ್ ಆಸ್ಪತ್ರೆಯ ಪ್ರಸೂತಿ ಗೃಹ (labour ward)ಹಾಗೂ ಶಸ್ತ್ರಚಿಕಿತ್ಸೆ (MOT) ಕಾರ್ಯಕ್ಕೆ ಕೇಂದ್ರ ಸರ್ಕಾರ ಲಕ್ಷಾ(LAQSHA) ಸರ್ಟಿಫಿಕೇಷನ್ನಲ್ಲಿ 92.5% ಅಂಕಗಳನ್ನು ನೀಡಿದೆ. ರಾಷ್ಟ್ರೀಯ ಮಟ್ಟದಲ್ಲಿಯೇ 2ನೇ ಅತ್ಯುತ್ತಮ ಪ್ರಸೂತಿ ಹಾಗೂ ಶಸ್ತ್ರಚಿಕಿತ್ಸೆ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದೆ.
ಗರ್ಭಿಣಿಯರ ಪಾಲಿಗೆ ಸಂಜೀವಿನಿಯಂತಾಗಿದೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ.. ಇದರ ಸಾಧನೆಗೆ ಗರಿ ಮೂಡಿದೆ.. ಇನ್ನೂ, ಕಿಮ್ಸ್ ಆಸ್ಪತ್ರೆಯು ಒಂದಿಲ್ಲೊಂದು ರೀತಿಯಲ್ಲಿ ಉತ್ತಮವಾದ ಸೇವೆಗೆ ಹೆಸರಾಗಿದ್ದಲ್ಲದೇ ಉತ್ತಮ ಕಾರ್ಯ ನಿರ್ವಹಣೆಯಿಂದ ಈಗ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಇನ್ನೂ, ಈ ಒಂದು ಕೇಂದ್ರ ಸರ್ಕಾರದ ಲಕ್ಷಾ(LAQSHA) ಸರ್ಟಿಫಿಕೇಷನ್ನಲ್ಲಿ ಕಳೆದ ವರ್ಷ ರಾಜ್ಯಮಟ್ಟದ ಮಾನ್ಯತೆ ಪಡೆದಿದ್ದ ಕಿಮ್ಸ್ ಈ ಬಾರಿಗೆ ರಾಷ್ಟ್ರೀಯ ಮಟ್ಟದ ಕೀರ್ತಿ ಪಡೆದಿದೆ.
ದೇಶದಲ್ಲಿಯೇ ಉತ್ತಮ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಿಮ್ಸ್ ಉತ್ತರ ಕರ್ನಾಟಕ ಭಾಗದ ಹಲವು ರೋಗಿಗಳ ಸಂಜೀವಿನಿಯಾಗಿದೆ ಎಂಬುದೇ ಹೆಮ್ಮೆಯ ವಿಷಯ. ಕಿಮ್ಸ್ ಕಾರ್ಯ ಸಾಕಷ್ಟು ಜನಮನ್ನಣೆ ಪಡೆದಿದ್ದು, ಈಗ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.