ಹುಬ್ಬಳ್ಳಿ:ಮುಂಬೈ ಡಿಸಿಪಿ ಹೆಸರಿನಲ್ಲಿ ನಗರದ ವೈದ್ಯರೊಬ್ಬರಿಗೆ ವಿಡಿಯೋ ಕಾಲ್ ಮೂಲಕ ಭಯ ಹುಟ್ಟಿಸಿ ವಿವಿಧ ಲಿಂಕ್ ಮೂಲಕ 30.16 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಡಾ.ರಾಜೀವ್ ಮೊಸಕ್ಕೊಳಗಾದವರು. ಖಾಸಗಿ ಕಂಪನಿ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯು ಕೆಲ ವಸ್ತುಗಳನ್ನು ಬುಕ್ ಮಾಡಿದ್ದಾರೆ. ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಲಿಂಕ್ ಇದೆ ಎಂದು ಮಾತನಾಡಿದ್ದಾರೆ. ಇದಕ್ಕೆ ರಾಜೀವ್ ಅವರು ತಾನು ಯಾವುದೇ ಕೋರಿಯರ್ ಮಾಡಿಲ್ಲ ಎಂದು ಹೇಳಿದಾಗ ನಿಮ್ಮ ಆಧಾರ್ ಕಾರ್ಡ್ ಮಾಹಿತಿ ಸೋರಿಕೆಯಾಗಿದೆ. ಇದಕ್ಕೆ ನೀವು ಮುಂಬೈ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದಿದ್ದಾರೆ. ನಂತರ ಆ್ಯಪ್ವೊಂದರ ಮೂಲಕ ವಿಡಿಯೋ ಕರೆ ಮಾಡಿದ ಅಪರಿಚಿತನು ತಾನು ಮುಂಬೈ ಡಿಸಿಪಿ ಎಂದು ಹೇಳಿ ಭಯ ಹುಟ್ಟಿಸಿದ್ದಾನೆ. ನಂತರ ವಿವಿಧ ಖಾತೆಗಳ ಮಾಹಿತಿ ಪಡೆದು 30,16,742 ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ಡಾ. ರಾಜೀವ್ ತಿಳಿಸಿದ್ದಾರೆ. ಈ ಕುರಿತು ಹುಬ್ಬಳ್ಳಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.