ಕರ್ನಾಟಕ

karnataka

ETV Bharat / state

Dharwad accident: ಧಾರವಾಡ ಬಳಿ ಲಾರಿ-ಕಾರು ಅಪಘಾತ; ಸ್ಥಳದಲ್ಲೇ ಮೂವರು ಸಾವು - ಲಾರಿ ಕಾರು ಅಪಘಾತ

ಧಾರವಾಡ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇನ್ನು ಬೆಂಗಳೂರು - ಮಂಗಳೂರು ಹೆದ್ದಾರಿಯ ಅಡ್ಡಹೊಳೆಯ ಬಳಿ ಕಾರು ಹೊಳೆಗೆ ಉರುಳಿ ಓರ್ವ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.

accident
accident ಧಾರವಾಡ ಅಪಘಾತ

By

Published : Jun 11, 2023, 10:34 AM IST

Updated : Jun 11, 2023, 11:20 AM IST

ಧಾರವಾಡ: ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ಧಾರವಾಡದ ಬೈಪಾಸ್‌ ರಸ್ತೆಯ ರಾಷ್ಟ್ರೀಯ ಹೆದ್ದಾರಿ 4 ರ ಹಳಿಯಾಳ ಸೇತುವೆ ಬಳಿ ಇಂದು ನಸುಕಿನ ಜಾವ ನಡೆದಿದೆ. ಮೃತರನ್ನು ಬಿಂದು ಗೌಡ (35), ಬಾಪು ಗೌಡ (36) ಎಂದು ಗುರುತಿಸಲಾಗಿದೆ. ಇನ್ನೋರ್ವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

ಹುಬ್ಬಳ್ಳಿಯಿಂದ ಬೆಳಗಾವಿ ಕಡೆಗೆ ಕಾರು ಹೋಗುತ್ತಿದ್ದಾಗ ಅಪಘಾತವಾಗಿದೆ. ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಇಬ್ಬರ ಗುರುತು ಗೊತ್ತಾಗಿದೆ. ಇನ್ನೋರ್ವನ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಪಘಾತಕ್ಕೀಡಾದ ಕಾರು ನುಜ್ಜುಗುಜ್ಜಾಗಿದೆ. ಶವಗಳು ಒಳಗಡೆ ಸಿಕ್ಕಿಕೊಂಡಿದ್ದವು. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಮಂಗಳೂರು - ಬೆಂಗಳೂರು ಹೆದ್ದಾರಿಯಲ್ಲೂ ಅಪಘಾತ:ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಎರ್ಟಿಗಾ ಕಾರು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆ ಬಳಿಯ ಹೊಳೆಗೆ ಉರುಳಿ ಬಿದ್ದ ಘಟನೆ ಇಂದು ನಸುಕಿನ ಜಾವ ನಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಹೊಸೂರು ನಿವಾಸಿ ಹರಿಪ್ರಸಾದ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ನೀರಿನಲ್ಲಿ ಮುಳುಗಿದೆ. ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಪ್ರವಾಸಕ್ಕೆ ತೆರಳಿದ್ದ ಮೂರು ಕುಟುಂಬಗಳ ಬದುಕಿನ ಪಯಣ ಅಂತ್ಯ: ಮೈಸೂರು ಭೀಕರ ಅಪಘಾತದ ಕೊನೆ ಕ್ಷಣದ ವಿಡಿಯೋ!

ಮೈಸೂರು ಬಳಿ ಇತ್ತೀಚೆಗೆ ನಡೆದಿತ್ತು ಭೀಕರ ಅಪಘಾತ: ಮೈಸೂರಿನ ಕೊಳ್ಳೇಗಾಲ ಮುಖ್ಯರಸ್ತೆಯ ಕುರುಬೂರು ಗ್ರಾಮದ ಬಳಿ ಇತ್ತೀಚೆಗೆ ಖಾಸಗಿ ಬಸ್ ಮತ್ತು ಇನೋವಾ ಕಾರು ನಡುವೆ ಡಿಕ್ಕಿ ಸಂಭವಿಸಿ 11 ಜನ ಮೃತಪಟ್ಟಿದ್ದರು. ಈ ಭೀಕರ ಅಪಘಾತದಲ್ಲಿ ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಗ್ರಾಮದ ಮೂರು ಕುಟುಂಬಗಳ 10 ಜನ ಸದಸ್ಯರ ಸಾವನ್ನಪ್ಪಿದ್ದರು. ಪ್ರವಾಸಕ್ಕೆಂದು ಬಳ್ಳಾರಿಯಿಂದ ಮೈಸೂರಿಗೆ ಕುಟುಂಬಸ್ಥರು ತೆರಳಿದ್ದ ವೇಳೆ ದುರಂತ ಸಂಭವಿಸಿತ್ತು. ಘಟನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ, ಮೃತರಿಗೆ ಪರಹಾರ ಘೋಷಿಸಿದ್ದರು.

ಇದನ್ನೂ ಓದಿ: Odisha Rail Mishap Video: ಒಡಿಶಾ ಭೀಕರ ರೈಲು ದುರಂತಕ್ಕೂ ಮುನ್ನ ಸೆರೆಯಾದ ವಿಡಿಯೋ

ಒಡಿಶಾ ರೈಲು ದುರಂತ:ಒಡಿಶಾದ ಬಾಲಸೋರ್​ ಜಿಲ್ಲೆಯಲ್ಲಿ ಕಳೆದ ವಾರ ನಡೆದ ತ್ರಿವಳಿ ರೈಲು ದುರಂತದಲ್ಲಿ 288 ಜನ ಮೃತಪಟ್ಟಿದ್ದರು. ಕಳೆದ 30 ವರ್ಷಗಳಲ್ಲಿ ನಡೆದ ದಾರುಣ ರೈಲು ಅಪಘಾತ ಇದಾಗಿದ್ದು, ದೇಶ ಸೇರಿದಂತೆ ವಿಶ್ವದ ನಾಯಕರು ಸಂತಾಪ ಸೂಚಿಸಿದ್ದರು.

ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದ ಬಳಿ ಬೆಂಗಳೂರು - ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ನಡುವೆ ಅಪಘಾತ ಸಂಭವಿಸಿದ್ದು ಈ ಭೀಕರ ದುರಂತಕ್ಕೆ ಕಾರಣ. ಅಪಘಾತದಲ್ಲಿ 288 ಜನ ಮೃತಪಟ್ಟದ್ದು, 747 ಜನರು ಗಾಯಗೊಂಡಿದ್ದರು. ಇನ್ನೂ ಹಲವರ ಸ್ಥಿತಿ ಚಿಂತಾಜನಕವಾಗಿತ್ತು. ಘಟನಾ ಸ್ಥಳಕ್ಕೆ ಪ್ರಧಾನಿ ಮೋದಿ ಮತ್ತು ರೈಲ್ವೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ: Congress Guarantee Scheme: ಇಂದು ಮಧ್ಯಾಹ್ನದಿಂದಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ... ಶಕ್ತಿ ಯೋಜನೆ ಅದ್ಧೂರಿ ಚಾಲನೆಗೆ ಸಿದ್ಧತೆ

Last Updated : Jun 11, 2023, 11:20 AM IST

ABOUT THE AUTHOR

...view details