ಕರ್ನಾಟಕ

karnataka

ETV Bharat / state

ಡಾ.ಮಲ್ಲಿಕಾರ್ಜುನ ಮನಸೂರರ 28ನೇ ಪುಣ್ಯಸ್ಮರಣೆ; ಸರಳ ಆಚರಣೆ - memory of D. mallikarjuna manasura

ಹಿಂದೂಸ್ತಾನಿ ಸಂಗೀತ ದಿಗ್ಗಜ ಡಾ.ಮಲ್ಲಿಕಾರ್ಜುನ ಮನಸೂರ ಅವರ ಪುಣ್ಯಸ್ಮರಣೆ ನಿಮಿತ್ತ ಪ್ರತಿ ವರ್ಷ ಆಯೋಜಿಸಲಾಗುತ್ತಿದ್ದ ಸಂಗೀತೋತ್ಸವವನ್ನು ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

28th-death-memory
ಮಲ್ಲಿಕಾರ್ಜುನ ಮನಸೂರ ಅವರ 28ನೇ ಪುಣ್ಯಸ್ಮರಣೆ

By

Published : Sep 12, 2020, 6:21 PM IST

ಧಾರವಾಡ:ಡಾ.ಮಲ್ಲಿಕಾರ್ಜುನ ಮನಸೂರ ಅವರ 28ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮನಸೂರರ ಸಮಾಧಿಗೆ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಪೂಜೆ ಸಲ್ಲಿಸಿ, ಪುಷ್ಪಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಶಿವಾನಂದ ಕರಾಳೆ, ಡಾ.ಮಲ್ಲಿಕಾರ್ಜುನ ಮನಸೂರ ಅವರ ಪುಣ್ಯಸ್ಮರಣೆ ನಿಮಿತ್ತ ಪ್ರತಿ ವರ್ಷ ಆಯೋಜಿಸಲಾಗುತ್ತಿದ್ದ ಸಂಗೀತೋತ್ಸವವನ್ನು ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಮುಂದೂಡಲಾಗಿದೆ. ಕಾರ್ಯಕ್ರಮಗಳನ್ನು ರದ್ದುಪಡಿಸಿ, ಅತ್ಯಂತ ಸರಳವಾಗಿ ಪೂಜೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಟ್ರಸ್ಟ್ ಸದಸ್ಯರ ಆಶಯದಂತೆ ಸಂಗೀತೋತ್ಸವವನ್ನು ಮತ್ತೆ ಮುಂದುವರೆಸಲಾಗುವುದು ಎಂದರು.

ಮಲ್ಲಿಕಾರ್ಜುನ ಮನಸೂರ ಅವರ 28ನೇ ಪುಣ್ಯಸ್ಮರಣೆ

ಡಾ.ಮಲ್ಲಿಕಾರ್ಜುನ ಮನಸೂರವರು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರ್ತಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಾಷ್ಟ್ರೀಯ ಸ್ಮಾರಕ ಟ್ರಸ್ಟ್​ ಅನ್ನು 1997 ರಲ್ಲಿಯೇ ರಚಿಸಿದೆ. ಟ್ರಸ್ಟ್ ವತಿಯಿಂದ ಅವರು ವಾಸ ಮಾಡಿದ್ದ ಮನೆಯನ್ನು ನವೀಕರಿಸಿ ವಸ್ತುಸಂಗ್ರಹಾಲಯವನ್ನಾಗಿ ಮಾಡಿ ಈಗಾಗಲೇ ಹಿಂದೂಸ್ತಾನಿ ಸಂಗೀತವನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಸಂಗೀತ ಶಾಲೆ ಪ್ರಾರಂಭಿಸಿದೆ ಎಂದು ಹೇಳಿದರು.

ABOUT THE AUTHOR

...view details