ಧಾರವಾಡ:ಜಿಲ್ಲೆಯಲ್ಲಿ ಇಂದು 279 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 11,314 ಕ್ಕೆ ಏರಿಕೆಯಾಗಿದೆ.
ಧಾರವಾಡ: 279 ಕೊರೊನಾ ಪ್ರಕರಣ ಪತ್ತೆ - ಕೊರೊನಾ
ಇಂದು ಜಿಲ್ಲೆಯಲ್ಲಿ ಒಟ್ಟು 279 ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ.
Nitesh patil
ಇದುವರೆಗೆ 8,678 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2,312 ಪ್ರಕರಣಗಳು ಸಕ್ರಿಯವಾಗಿವೆ. 74 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 325 ಜನ ಮೃತಪಟ್ಟಿದ್ದಾರೆ.
ಇಂದಿನ 279 ಕೊರೊನಾ ಸೋಂಕಿತರ ಪೈಕಿ ಹೊರ ಜಿಲ್ಲೆಯ ಪ್ರಕರಣಗಳು ಸಹ ಸೇರಿಕೊಂಡಿವೆ. ಇಂದು ಕೊರೊನಾಗೆ 9 ಜನರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 325 ಜನ ಬಲಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.