ಕರ್ನಾಟಕ

karnataka

By

Published : Feb 26, 2021, 8:22 AM IST

ETV Bharat / state

24X7 ನಿರಂತರ ನೀರು ಸರಬರಾಜು ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ : ಸಚಿವ ಜಗದೀಶ್ ಶೆಟ್ಟರ್

ಕಾಮಗಾರಿ ವೇಳೆಯಲ್ಲಿ ರಸ್ತೆ ಅಗೆದು ಪೈಪ್ ಲೈನ್ ಅಳವಡಿಸಿದ ಮೇಲೆ, ವೇಗವಾಗಿ ರಸ್ತೆಯನ್ನು ಮರು ನಿರ್ಮಿಸಿ, ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸಿ, ವಾರ್ಡ್​ವೊಂದರ ಕಾಮಗಾರಿ ಪೂರ್ಣಗೊಳಿಸಿದ ಮೇಲೆ ಇನ್ನೊಂದು ಕಡೆ ಕಾಮಗಾರಿ‌ ಆರಂಭಿಸಿ. ಕಾಮಗಾರಿಯ ವೇಳೆ ಸಾರ್ವಜನಿಕರಿಗೆ ತೊಂದರೆಯಾಗಬಾರದು..

ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ವಿಶ್ವಬ್ಯಾಂಕ್ ನೆರವಿನ 24X7 ನಿರಂತರ ನೀರು ಸರಬರಾಜು ಯೋಜನೆ ಅವಳಿ ನಗರದ ಬಹು ದಿನದ ಕನಸಾಗಿದೆ. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್​ ಶೆಟ್ಟರ್ ಹೇಳಿದರು.

ನಗರದ ಕಿರಿಯಾಡ್ ಹೋಟೆಲ್​ನಲ್ಲಿ ಆಯೋಜಿಸಲಾದ 24X7 ನಿರಂತರ ನೀರು ಸರಬರಾಜು ಯೋಜನೆಯ ರೀ-ಲಾಂಚ್ ಕಾರ್ಯಾಗಾರ ಉದ್ಘಾಟಸಿ ಮಾತನಾಡಿದ ಅವರು, ಆರಂಭದಲ್ಲಿ ಹುಬ್ಬಳಿ ಹಾಗೂ ಧಾರವಾಡದ 8 ವಾರ್ಡ್​ಗಳಲ್ಲಿ ಪ್ರಾಯೋಗಿಕವಾಗಿ 24X7 ನಿರಂತರ ನೀರು ಸರಬರಾಜು ಯೋಜನೆ ಜಾರಿಗೆ ತರಲಾಯಿತು.

ನಂತರ ನಗರ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿಯಿಂದ 115 ಕೋಟಿ ವೆಚ್ಚದಲ್ಲಿ 18 ವಾರ್ಡ್​ಗಳಿಗೆ ಯೋಜನೆ ವಿಸ್ತರಿಸಲಾಯಿತು‌. ನಂತರ ಕಳೆದ ಸರ್ಕಾರದ ಅವಧಿಯಲ್ಲಿ ಟೆಂಡರ್​ ಕರೆಯಲಾಯಿತು.

ಟೆಂಡರ್ ತೆಗೆದುಕೊಂಡ ಕಂಪನಿ ನಕಾರಾತ್ಮಕ ಹಾಗೂ ಹೆಚ್ಚಿನ ವೆಚ್ಚದ ನೆಪ ಹೇಳಿ ಯೋಜನೆ ಅನುಷ್ಠಾನಗೊಳಿಸಲಿಲ್ಲ. ಇದರಿಂದಾಗಿ ಹೊಸದಾಗಿ ಮತ್ತೆ ಟೆಂಡರ್ ಕರೆದು ಎಲ್ ಅಂಡ್ ಟಿ ನಿರ್ಮಾಣ ಸಂಸ್ಥೆಗೆ ನೀಡಲಾಯಿತು. ಸಂಸ್ಥೆ ಆಶಾದಾಯಕವಾಗಿ ಕೆಲಸ ಆರಂಭಿಸಿದೆ. ಮಹಾನಗರದ 47 ವಾರ್ಡ್​ಗಳಲ್ಲಿಯೂ ಕೂಡ ಯೋಜನೆ ಜಾರಿಗೆ ತರಲಾಗುವುದು ಎಂದರು.

ಈ ಯೋಜನೆಗೆ ಒಳಪಡದ ವಾರ್ಡ್​ಗಳ ಮಹಿಳೆಯರು ಯೋಜನೆ ಅನುಷ್ಠಾನದ ಬಗ್ಗೆ ಸದಾಕಾಲ ಮನವಿ ಮಾಡುತ್ತಿದ್ದರು. ವಿರೋಧ ಪಕ್ಷದ ನಾಯಕನಿದ್ದಾಗ ವಿಧಾನಸಭೆ ಅಧಿವೇಶನದಲ್ಲಿ ಯೋಜನೆ ಬಗ್ಗೆ ಹೋರಾಟ ಮಾಡಿದ್ದೇನೆ. ಇದೀಗ ಯೋಜನೆ ಅನುಷ್ಠಾನಕ್ಕೆ ಕಾಲ ಕೂಡಿ ಬಂದಿದೆ.

ಕಾಮಗಾರಿ ವೇಳೆಯಲ್ಲಿ ರಸ್ತೆ ಅಗೆದು ಪೈಪ್ ಲೈನ್ ಅಳವಡಿಸಿದ ಮೇಲೆ, ವೇಗವಾಗಿ ರಸ್ತೆಯನ್ನು ಮರು ನಿರ್ಮಿಸಿ, ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸಿ, ವಾರ್ಡ್​ವೊಂದರ ಕಾಮಗಾರಿ ಪೂರ್ಣಗೊಳಿಸಿದ ಮೇಲೆ ಇನ್ನೊಂದು ಕಡೆ ಕಾಮಗಾರಿ‌ ಆರಂಭಿಸಿ. ಕಾಮಗಾರಿಯ ವೇಳೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಸೂಚನೆ ನೀಡಿದರು.

ಹುಬ್ಬಳ್ಳಿ-ಧಾರವಾಡದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲ ಯೋಜನೆಗಳು ಜಾರಿಯಾಗುತ್ತಿವೆ. ಸ್ಮಾರ್ಟ್ ಸಿಟಿ, ಏರ್ಪೋರ್ಟ್ ಅಭಿವೃದ್ಧಿ, ಕೇಂದ್ರ ರಸ್ತೆ ನಿಧಿ ಅಡಿ ರಸ್ತೆ ನಿರ್ಮಾಣ, ತ್ವರಿತ ಬಸ್ ಸಾರಿಗೆ ಸೇವೆ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ. ಕೈಗಾರಿಕಗಳ ನೀರಿನ ಅವಶ್ಯಕತೆಯನ್ನು ಸಹ ಪೂರೈಸಲಾಗುವುದು. ಜಲಧಾರೆ ಯೋಜನೆಯ ಮೂಲಕ ಗ್ರಾಮೀಣ ಭಾಗಕ್ಕೂ ನಿರಂತರ ನೀರು ಸರಬರಾಜು ಮಾಡಲಾಗುವುದು ಎಂದರು.

ABOUT THE AUTHOR

...view details