ಧಾರವಾಡ:ಜಿಲ್ಲೆಯಲ್ಲಿ ಏಪ್ರಿಲ್ 29ರವರೆಗೆ ದಾಖಲಾದ 440 ಶಂಕಿತರ ಪೈಕಿ 233 ವರದಿ ನೆಗೆಟಿವ್ ಬಂದಿದ್ದು, 207 ಶಂಕಿತರ ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಿದೆ.
ಭಯ ಬೇಡ, ಮನೆಯಲ್ಲಿರಿ: ಧಾರವಾಡದಲ್ಲಿ 233 ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ - ಧಾರವಾಡದಲ್ಲಿ ಕೊರೊನಾ ಪರೀಕ್ಷೆ ವರದಿ
ಶಿಕ್ಷಣ ಕಾಶಿ ಧಾರವಾಡದಲ್ಲಿ ಇಂದಿನವರೆಗೆ 393 ಶಂಕಿತರ ವರದಿ ಬಾಕಿ ಇದ್ದು, 23 ಶಂಕಿತರ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಲ್ಲಿ ಮಾಹಿತಿ ಲಭ್ಯವಾಗಿದೆ.
ಜಿಲ್ಲಾಧಿಕಾರಿ ದೀಪಾ ಚೋಳನ್
ಇಂದು 24 ಗಂಟೆಗಳಲ್ಲಿ 186 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ. ಇವುಗಳನ್ನು ಒಳಗೊಂಡಂತೆ ಒಟ್ಟು 393 ಶಂಕಿತರ ವರದಿ ಬಾಕಿ ಇದೆ. 8 ಜನರಿಗೆ ಆಸ್ಪತ್ರೆಯ ಐಸೊಲೇಷನ್ನಲ್ಲಿ ಇರಿಸಲಾಗಿದೆ.
ಇಲ್ಲಿಯವರೆಗೆ ಒಟ್ಟು 3180 ಜನರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ. ಅದರಲ್ಲಿ 2,386 ಜನರಿಗೆ 14 ದಿನಗಳ ಐಸೊಲೇಷನ್ ಇದ್ದು, 83 ಜನರಿಂದ 14 ದಿನಗಳ ಐಸೊಲೇಷನ್ ಹಾಗೂ 703 ಜನರ 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಂಡಿದೆ.