ಹಾವೇರಿ :ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೊಟೆಬೆನ್ನೂರು ಗ್ರಾಮದ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ಮೃತರನ್ನು ವೀರಣ್ಣ ಬುಡಪನಹಳ್ಳಿ (45) ಮತ್ತು ಬಸಪ್ಪ ಗೋಣೆಪ್ಪನವರ (47) ಎಂದು ಗುರುತಿಸಲಾಗಿದೆ. ಮೃತರಿಬ್ಬರು ತಮ್ಮ ದ್ವಿಚಕ್ರ ವಾಹನ (ಸ್ಕೂಟಿ)ದಲ್ಲಿ ಹಾವೇರಿ ಕಡೆಗೆ ಹೊರಟಿದ್ರು.