ಕರ್ನಾಟಕ

karnataka

ETV Bharat / state

ಹಿರೆಹೊನ್ನಳ್ಳಿಯಲ್ಲಿಂದು ಇಬ್ಬರಲ್ಲಿ ಸೋಂಕು ದೃಢ - Kalagatagi corona case

ಹಿರೆಹೊನ್ನಳ್ಳಿಯಲ್ಲಿಂದು ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ಗ್ರಾಮಕ್ಕೆ ತಹಶೀಲ್ದಾರ್ ಅಶೋಕ ಶಿಗ್ಗಾವಿ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲನೆ ಮಾಡಿ, ಸೋಂಕಿತನ ಮನೆಯ ಪ್ರದೇಶವನ್ನು ಸೀಲ್ ಡೌನ್ ಮಾಡಿಸಿದ್ದಾರೆ.

Hirehonnalli corona case
Hirehonnalli corona case

By

Published : Jul 3, 2020, 10:38 PM IST

ಕಲಘಟಗಿ: ತಾಲೂಕಿನ‌ ಹಿರೆಹೊನ್ನಳ್ಳಿಯಲ್ಲಿಂದು ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ಹಿರೆಹೊನ್ನಳ್ಳಿ ನಿವಾಸಿ P-15610 ( 27 ವರ್ಷ, ಪುರುಷ) ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ( ಐಎಲ್ ಐ) ಬಳಲುತ್ತಿದ್ದರು. ಸದ್ಯ ಸೋಂಕು ದೃಢಪಟ್ಟಿದ್ದು, ಇವರನ್ನು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಹಿರೇಹೊನ್ನಳ್ಳಿ ಸೋಂಕು ಪ್ರಕರಣಗಳು
ಇನ್ನೂ ಇದೇ ಗ್ರಾಮದ ಸುಮಾರು 60 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಗ್ರಾಮಕ್ಕೆ ತಹಶೀಲ್ದಾರ್​ ಅಶೋಕ ಶಿಗ್ಗಾವಿ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲನೆ ಮಾಡಿ, ಸೋಂಕಿತನ ಮನೆಯ ಪ್ರದೇಶವನ್ನು ಸೀಲ್ ಡೌನ್ ಮಾಡಿಸಿದ್ದಾರೆ.

ಪಿಡಿಒ ಉಮೇಶ್​ ಚಿಕ್ಕನ್ನವರ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಸೋಂಕಿತನ ಟ್ರ್ಯಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಬೇಕಿದೆ.

ABOUT THE AUTHOR

...view details