ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಿಂದ ವಿಶೇಷ ಬಸ್​​ಗಳಲ್ಲಿ‌ ತಮ್ಮ ತವರಿಗೆ ಮರಳಿದ 198 ಜನ - special buses

ಜಿಲ್ಲೆಗೆ ಆಗಮಿಸಿದ್ದ ಕೂಲಿ ಕಾರ್ಮಿರು ಸೇರಿದಂತೆ ಇತರರನ್ನು ಹುಬ್ಬಳ್ಳಿ-ಧಾರವಾಡ ಜಿಲ್ಲಾಡಳಿತದಿಂದ ವಿಶೇಷ ಬಸ್ ಸೌಲಭ್ಯದ ಮೂಲಕ ಅವರವರ ಊರುಗಳಿಗೆ ಕಳಿಹಿಸಿಕೊಡಲಾಯಿತು.

Workers has been shifted from Hubbali in special buses
ವಿಶೇಷ ಬಸ್ ವ್ಯವಸ್ಥೆ

By

Published : May 4, 2020, 8:53 PM IST

ಹುಬ್ಬಳ್ಳಿ:ರಾಜ್ಯದ ಇತರೆ ಸ್ಥಳಗಳಿಂದ ಜಿಲ್ಲೆಗೆ ಆಗಮಿಸಿ ದುಡಿಯುತ್ತಿದ್ದ ವಲಸೆ ಕಾರ್ಮಿಕರು ಸೇರಿದಂತೆ ಪ್ರವಾಸಿಗರು, ಯಾತ್ರಿಗಳು ಹಾಗೂ ವಿದ್ಯಾರ್ಥಿಗಳಿಗೆ ಅವರವರ ತವರಿಗೆ ತೆರಳಲು ಜಿಲ್ಲಾಡಳಿತದಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು.

ವಿಶೇಷ ಬಸ್ ವ್ಯವಸ್ಥೆ

ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಿಂದ ಸಂಜೆ 6 ಗಂಟೆಯವರೆಗೆ ಒಟ್ಟು 7 ಬಸ್​​ಗಳಲ್ಲಿ 198 ಜನರು ತಮ್ಮ ಊರುಗಳಿಗೆ ಮರಳಿದರು. ಬೆಂಗಳೂರು, ಕಲಬುರಗಿ, ಬೀದರ್, ಅಫಜಲಪುರ, ಮಂಗಳೂರು, ರಾಯಚೂರು ಮಾರ್ಗಗಳಲ್ಲಿ ವಿಶೇಷ ಬಸ್ ಮೂಲಕ ಪ್ರಯಾಣಿಕರನ್ನು ಕಳುಹಿಸಲಾಗಿದೆ.

ವಿಶೇಷ ಬಸ್ ವ್ಯವಸ್ಥೆ

ಉಪ ವಿಭಾಗಾಧಿಕಾರಿ ಮಹಮದ್ ಜುಬೇರ್, ತಹಶೀಲ್ದಾರ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ವಾ.ಕ.ರ.ಸಾ.ಸಂ ಅಧಿಕಾರಿಗಳಾದ ಹೆಚ್.ಆರ್.ರಾಮನಗೌಡರ, ಅಶೋಕ ಪಾಟೀಲ್​​ ಮತ್ತಿತರರು ಹೊರ ಜಿಲ್ಲೆಗಳ ಪ್ರಯಾಣಿಕರನ್ನು ಕಳುಹಿಸುವ ಕಾರ್ಯನಿರ್ವಹಣೆ ಮಾಡಿದರು. ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿ, ನೋಂದಣಿ ಮಾಡಿಕೊಂಡು, ಸಂಪೂರ್ಣ ವಿವರಗಳನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.

ವಿಶೇಷ ಬಸ್ ವ್ಯವಸ್ಥೆ

ABOUT THE AUTHOR

...view details