ಕರ್ನಾಟಕ

karnataka

ETV Bharat / state

ಹು - ಧಾ ಪೊಲೀಸ್ ಕಮೀಷನರೇಟ್​ ವ್ಯಾಪ್ತಿಯಲ್ಲಿ ಮೇಜರ್ ಸರ್ಜರಿ: 198 ಸಿಬ್ಬಂದಿ ವರ್ಗಾವಣೆ

ನವನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪೊಲೀಸ್ ಆಯುಕ್ತ ಲಾಭೂರಾಮ ನೇತೃತ್ವದಲ್ಲಿ ವೈಯಕ್ತಿಕ ಕೌನ್ಸೆಲಿಂಗ್‌ ನಡೆಸಲಾಗಿತ್ತು. ಇದೀಗ ಒಟ್ಟು 198 ಸಿಬ್ಬಂದಿಯನ್ನ ಬೇರೆಡೆ ವರ್ಗಾಯಿಸಿ ಆದೇಶ ಹೊರಬಿದ್ದಿದೆ.

ಹು-ಧಾ ಪೊಲೀಸ್ ಕಮೀಷನರೇಟ್​ ವ್ಯಾಪ್ತಿಯಲ್ಲಿ ಮೇಜರ್ ಸರ್ಜರಿ
ಹು-ಧಾ ಪೊಲೀಸ್ ಕಮೀಷನರೇಟ್​ ವ್ಯಾಪ್ತಿಯಲ್ಲಿ ಮೇಜರ್ ಸರ್ಜರಿ

By

Published : Jul 23, 2021, 9:55 AM IST

ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್​ ವ್ಯಾಪ್ತಿಯಲ್ಲಿ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಒಟ್ಟು 198 ಸಿಬ್ಬಂದಿಯನ್ನ ವರ್ಗಾವಣೆ ಮಾಡಲಾಗಿದೆ. ಕಮಿಷನರೇಟ್ ವ್ಯಾಪ್ತಿಯ ಠಾಣೆಯಲ್ಲಿ 6 ವರ್ಷಕ್ಕಿಂತ ಮೇಲ್ಪಟ್ಟು ಠಿಕಾಣಿ ಹೂಡಿದ್ದ 198 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬೇರೆಡೆ ವರ್ಗಾಯಿಸಲಾಗಿದೆ.

ಪೊಲೀಸ್ ಆಯುಕ್ತ ಲಾಭೂರಾಮ

ನವನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪೊಲೀಸ್ ಆಯುಕ್ತ ಲಾಭೂರಾಮ ನೇತೃತ್ವದಲ್ಲಿ ವೈಯಕ್ತಿಕ ಕೌನ್ಸೆಲಿಂಗ್‌ ನಡೆಸಿದ್ದು, 11 ಎಎಸ್‌ಐ, 53 ಹೆಡ್​​​​ಕಾನ್ಸ್​ಟೇಬಲ್​ ಹಾಗೂ 128 ಕಾನ್ಸ್​​ಟೇಬಲ್​ಗಳನ್ನು ಪ್ರತ್ಯೇಕವಾಗಿ ಕೌನ್ಸೆಲಿಂಗ್ ನಡೆಸಿ ವರ್ಗಾವಣೆ ಮಾಡಲಾಗಿದೆ. ಇವರಲ್ಲಿ ಬಹುತೇಕ ಸಿಬ್ಬಂದಿ ಹುಬ್ಬಳ್ಳಿಯಿಂದ ಧಾರವಾಡ ವ್ಯಾಪ್ತಿಗೆ ಹಾಗೂ ಧಾರವಾಡದಿಂದ ಹುಬ್ಬಳ್ಳಿ ವ್ಯಾಪ್ತಿಗೆ ವರ್ಗಾವಣೆಯಾಗಿದ್ದಾರೆ. ಇದರಲ್ಲಿ ಸಂಚಾರಿ ಪೊಲೀಸ್​ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹ ಸೇರಿದ್ದಾರೆ.

ಓದಿ:ದುಬಾರಿ ಬೆಲೆ ಬೈಕ್​ ಕೊಡಿಸದ ತಂದೆ.. ಬಾವಿಗೆ ಹಾರಿ ಪ್ರಾಣ ಬಿಟ್ಟ ಮಗ?

ABOUT THE AUTHOR

...view details