ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಸಿದ್ದಾರೂಢ ಮಠದಲ್ಲಿ 19 ಲಕ್ಷ ರೂ. ದೇಣಿಗೆ ಸಂಗ್ರಹ - ಶ್ರೀ ಸಿದ್ಧಾರೂಢಸ್ವಾಮಿ ಮಠದ ಕಾಣಿಕೆ ಡಬ್ಬ

ಶ್ರೀ ಸಿದ್ಧಾರೂಢಸ್ವಾಮಿ ಮಠದ ಕಾಣಿಕೆ ಡಬ್ಬದಲ್ಲಿ ಆಗಸ್ಟ್ 25 ರಿಂದ ಸೆಪ್ಟೆಂಬರ್ 15ರವರೆಗೆ 19.06 ಲಕ್ಷ ರೂ. ಸಂಗ್ರಹವಾಗಿದೆ.

siddaruda-matt
ಸಿದ್ದಾರೂಢ ಮಠ

By

Published : Sep 16, 2021, 12:05 PM IST

ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢಸ್ವಾಮಿ ಮಠದ ಕಾಣಿಕೆ ಡಬ್ಬದಲ್ಲಿ 21 ದಿನಗಳಲ್ಲಿ 19.06 ಲಕ್ಷ ರೂ. ಸಂಗ್ರಹವಾಗಿದೆ. ಅಲ್ಲದೇ 38,078 ರೂ. ಮೊತ್ತದ ಬೆಳ್ಳಿ ಸಾಮಗ್ರಿಗಳು ಸಂಗ್ರಹವಾಗಿವೆ.

ಆಗಸ್ಟ್ 25 ರಿಂದ ಸೆಪ್ಟೆಂಬರ್ 15ರವರೆಗೆ ಸಂಗ್ರಹವಾದ ಕಾಣಿಕೆಯನ್ನು ಸೆ.15 ರಂದು ಎಣಿಕೆ ಮಾಡಲಾಯಿತು. ಸ್ಟೇಟ್ ಬ್ಯಾಂಕ್ ಸಿದ್ದಾರೂಢನಗರ ಶಾಖೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಹಾಗೂ ಭಕ್ತರ ಸಮ್ಮುಖದಲ್ಲಿ ಡಬ್ಬ ತೆರೆದು ಎಣಿಕೆ ಮಾಡಲಾಯಿತು.

ಎಣಿಕೆ ಮೇಲ್ವಿಚಾರಣೆಯನ್ನು ಟ್ರಸ್ಟ್ ಕಮಿಟಿ ಚೇರಮನ್ ಡಿ.ಡಿ. ಮಾಳಗಿ, ಗೌರವ ಕಾರ್ಯದರ್ಶಿ ಜಗದೀಶ ಮಗಜಿಕೊಂಡಿ ಹಾಗೂ ಧರ್ಮದರ್ಶಿಗಳು ವಹಿಸಿದ್ದರು.

ABOUT THE AUTHOR

...view details