ಧಾರವಾಡ: ಜಿಲ್ಲೆಯಲ್ಲಿ ಇಂದು 17 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಂದು ವರ್ಷದ ಮಗುವಿಗೂ ಕೊರೊನಾ ವಕ್ಕರಿಸಿದೆ.
ಧಾರವಾಡದಲ್ಲಿ 17 ಕೋವಿಡ್ ಪಾಸಿಟಿವ್ ದೃಢ: ಸೋಂಕಿತರ ಸಂಖ್ಯೆ 345ಕ್ಕೆ ಏರಿದೆ - ಧಾರವಾಡದಲ್ಲಿ ಸೋಂಕಿತರ ಸಂಖ್ಯೆ 345
ಧಾರವಾಡದಲ್ಲಿ ಇಂದು 17 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಂದು ವರ್ಷದ ಮಗುವಿಗೂ ಕೊರೊನಾ ವಕ್ಕರಿಸಿದೆ.
ಕೋವಿಡ್
ಇಂದು 17 ಕೋವಿಡ್ ಪಾಸಿಟಿವ್ ಪ್ರಕರಣಗಳು ಧಾರವಾಡದಲ್ಲಿ ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 345ಕ್ಕೆ ಏರಿಕೆಯಾಗಿದೆ. ಸದ್ಯ 151 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಎಂಟು ಜನ ಮೃತಪಟ್ಟಿದ್ದಾರೆ.
ಇದುವರೆಗೆ 186 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.