ಧಾರವಾಡ:ಅಂಕಪಟ್ಟಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಮತ್ತೊಂದು ಮಹಾ ಯಡವಟ್ಟು ಮಾಡಿಕೊಂಡಿದೆ. ವಾಣಿಜ್ಯ ವಿಭಾಗದ ಅಂತಿಮ ವರ್ಷದ ಪರೀಕ್ಷಾ ಕನ್ನಡ ವಿಷಯದ ಅಂಕಪಟ್ಟಿಯಲ್ಲಿ ಕವಿವಿ ತಪ್ಪು ಮಾಡಿ ಸಿಕ್ಕಿಕೊಂಡಿದೆ.
ಕಡ್ಡಾಯ ಕನ್ನಡ ವಿಷಯದ ಅಂಕದ ವಿಷಯದಲ್ಲಿ ಯಡವಟ್ಟಾಗಿದ್ದು, ಕಡ್ಡಾಯ ಕನ್ನಡ ವಿಷಯದಲ್ಲಿ ಬಂದ ಅಂಕಗಳನ್ನು ಒಟ್ಟಾರೆ ಫಲಿತಾಂಶಕ್ಕೆ ಸೇರ್ಪಡೆ ಮಾಡಿದೆ. ಮೊದಲು ಕನ್ನಡ ಕಲಿ ಎಂಬ ವಿಷಯ ಇತ್ತು. ಈಗ ಕಡ್ಡಾಯ ಕನ್ನಡ ಎಂದು ಮಾಡಲಾಗಿದೆ. ಕಡ್ಡಾಯ ಕನ್ನಡ ಕೋರ್ಸ್ ಸಬ್ಜೆಕ್ಟ್ ಅಲ್ಲದೇ ಇದ್ದರೂ ಆ ಅಂಕಗಳನ್ನು ಒಟ್ಟಾರೆ ಫಲಿತಾಂಶಕ್ಕೆ ಸೇರ್ಪಡೆ ಮಾಡಿ ಕವಿವಿ ಎಡವಟ್ಟು ಮಾಡಿಕೊಂಡಿದೆ.