ಹುಬ್ಬಳ್ಳಿ: ಭೌತಿಕ ಸುಖ ಭೋಗಗಳಿಗೆ ವಿದಾಯ ಹೇಳಿ ಲೋಕ ಕಲ್ಯಾಣಕ್ಕೆ ತನ್ನನ್ನು ತಾನು ಸಮರ್ಪಿಸಿಕೊಳ್ಳಲು ಶಿವಮೊಗ್ಗ ಮೂಲದ 14 ವರ್ಷದ ಬಾಲಕಿ ಸಿದ್ದಿ ವಿನಾಯಕಿಯಾ ಸಿದ್ದಳಾಗಿದ್ದಾಳೆ. ಏ.21 ರಂದು ನಗರದ ಕೇಶ್ವಾಪುರದ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಶ್ರೀ ಜೈನ್ ಭಗವತಿ ದೀಕ್ಷೆ ಸ್ವೀಕರಿಸಲಿದ್ದಾರೆ. ವರ್ಧಮಾನ ಸ್ಥಾನಕವಾಸಿ ಜೈನ್ ಶ್ರಾವಕ ಸಂಘದ ಅಧ್ಯಕ್ಷ ಮಹೇಂದ್ರ ಸಿಎಂ ಈ ಬಗ್ಗೆ ಮಾಹಿತಿ ನೀಡಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ತಪಸ್ಸು ಆಚರಿಸುತ್ತ ಸುಮಾರು 75 ಸಾವಿರ ಕಿ.ಮೀ ಪಾದಯಾತ್ರೆ ಕೈಗೊಂಡ ನರೇಶ ಮುನಿಜಿ, ಶಾಲಿಭದ್ರ ಮುನಿಜಿ, ದಕ್ಷಿಣ ದೀಪಿಕಾ, ಗುರುಣಿ ಮೈಯ್ಯಾ, ಸತ್ಯ ಪ್ರಭಾಜಿ ಸೇರಿದಂತೆ ವಿವಿಧ ಸಾಧು ಸಂತರ ದಿವ್ಯ ಸಾನಿಧ್ಯದಲ್ಲಿ ಸಿದ್ದಿ ವಿನಾಯಕಿಯಾ ಭೌತಿಕ ಸುಖಗಳಿಗೆ ತಿಲಾಂಜಲಿಯಿಡಲಿದ್ದಾರೆ. ಬಳಿಕ ಶ್ವೇತ ವರ್ಣದ ವಸ್ತ್ರಧಾರಣೆ ಮಾಡುವರು ಎಂದರು.