ಕರ್ನಾಟಕ

karnataka

ETV Bharat / state

ಆಕ್ಸಿಜನ್ ಕೊರತೆ ನೀಗಿಸಲು ಸರ್ಕಾರ ಬದ್ಧ: ಜಗದೀಶ್ ಶೆಟ್ಟರ್​ ಅಭಯ

ತಳ್ಳುವ ಗಾಡಿಯಲ್ಲಿ ತರಕಾರಿ ಮಾರಲು ಅವಕಾಶ ಕಲ್ಪಿಸಲಾಗಿದೆ. ಕಿರಾಣಿ ಅಂಗಡಿಗಳಿಗೆ ನಿಶ್ಚಿತವಾದ ಗ್ರಾಹಕರು ಇರುತ್ತಾರೆ. ಅವರಿಂದ ಫೋನ್​ ಮೂಲಕ ಆರ್ಡರ್ ಪಡೆದು ಮನೆಗೆ ದಿನಸಿ ಪದಾರ್ಥಗಳನ್ನು ಕಳುಹಿಸಿದರೆ ಅನುಕೂಲವಾಗುತ್ತದೆ. ಗ್ರಾಹರು ಅಗತ್ಯ ವಸ್ತುಗಳು, ಔಷಧಗಳ ನೆಪ ಮಾಡಿಕೊಂಡು ನಗರದಲ್ಲಿ ಓಡಾಟ ಮಾಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

  14 days of tough lockdown enforcement in hubli: jagadish shettar
14 days of tough lockdown enforcement in hubli: jagadish shettar

By

Published : May 10, 2021, 8:40 PM IST

ಹುಬ್ಬಳ್ಳಿ: ಜಿಲ್ಲೆಯಲ್ಲಿ 14 ದಿನಗಳ ಕಾಲ ಕಠಿಣ ಲಾಕ್‌ಡೌನ್ ಜಾರಿ ಮಾಡಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕು. ಸರ್ಕಾರದ ಮಾರ್ಗದರ್ಶನಗಳನ್ನು ಪಾಲಿಸಬೇಕು. ಅನಗತ್ಯವಾಗಿ ಹೊರಗಡೆ ತಿರುಗಾಡಬಾರದು. ಈ 14 ದಿನಗಳ ಕಾಲ ನಮ್ಮನ್ನು ನಾವು ನಿಯಂತ್ರಿಸಿದರೆ, ವೈರಾಣು ನಿಯಂತ್ರಿಸಿದಂತೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಲಾಕ್‌ಡೌನ್ ಹಾಗೂ ಜಿಲ್ಲೆಯ ಆರೋಗ್ಯ ಸ್ಥಿತಿಗಳ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರಮಾಣದ ಆಕ್ಸಿನ್ ಸರಬಾರಜು ಮಾಡಿ, ಆಕ್ಸಿಜನ್ ಕೊರತೆ ನೀಗಿಸಲು ಪ್ರಯತ್ನಿಸುತ್ತಿವೆ. ಕೇಂದ್ರ ರೈಲ್ವೇ ಸಚಿವ ಪಿಯುಷ್ ಗೋಯಲ್ ಜೊತೆಯಲ್ಲಿ ಸಂಪರ್ಕದಲ್ಲಿದ್ದು ಹೆಚ್ಚಿನ ಆಕ್ಸಿಜನ್ ಪಡೆಯಲು ಪ್ರಯತ್ನಿಸಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಅಧಿಕಾರಿಗಳನ್ನು ಸಮನ್ವಯಗೊಳಿಸಿ ಆಕ್ಸಿಜನ್ ವಿತರಣೆ ಸರಬರಾಜನ್ನು ಕ್ರಮಬದ್ದ ಗೊಳಿಸಲಾಗುತ್ತಿದೆ ಎಂದರು.

ತಳ್ಳುಗಾಡಿಯಲ್ಲಿ ತರಕಾರಿ :

ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಸುಮ್ಮನೆ ಬೀದಿಗೆ ಬರುವುದನ್ನು ನಿಯಂತ್ರಿಸಿಕೊಳ್ಳಬೇಕಿದೆ. ತಳ್ಳುವ ಗಾಡಿಯಲ್ಲಿ ತರಕಾರಿ ಮಾರಲು ಅವಕಾಶ ಕಲ್ಪಿಸಲಾಗಿದೆ. ಕಿರಾಣಿ ಅಂಗಡಿಗಳಿಗೆ ನಿಶ್ಚಿತವಾದ ಗ್ರಾಹರು ಇರುತ್ತಾರೆ. ಅವರಿಂದ ಫೋನ್​ ಮೂಲಕ ಆರ್ಡರ್ ಪಡೆದು ಮನೆಗೆ ದಿನಸಿ ಪದಾರ್ಥಗಳನ್ನು ಕಳುಹಿಸಿದರೆ ಅನುಕೂಲವಾಗುತ್ತದೆ. ಗ್ರಾಹರು ಅಗತ್ಯ ವಸ್ತುಗಳು, ಔಷಧಗಳ ನೆಪ ಮಾಡಿಕೊಂಡು ನಗರದಲ್ಲಿ ಓಡಾಟ ಮಾಡಬಾರದು. ಪ್ರತಿ ಏರಿಯಾಗಳಲ್ಲಿ ಕಿರಾಣಿ ಹಾಗೂ ಔಷಧ ಅಂಗಡಿಗಳಿವೆ ಅಲ್ಲಿಯೇ ಖರೀದಿಸಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕೇಂದ್ರ ಸರ್ಕಾರದಿಂದ 30 ಟನ್ ಸಾಮರ್ಥ್ಯದ 6 ಟ್ಯಾಂಕರ್ ರಾಜ್ಯಕ್ಕೆ ಆಗಮನ:

ಭಾರತ ಸರ್ಕಾರ ಆಕ್ಸಿಜನ್ ಪ್ರಮಾಣವನ್ನು ಹೆಚ್ಚು ಮಾಡಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. 30 ಟನ್ ಸಾಮರ್ಥ್ಯದ ಆರು ಟ್ಯಾಂಕರ್‌ಗಳನ್ನು ಕೇಂದ್ರ ಸರ್ಕಾರ ನೀಡಿದೆ. ನಾಳೆಯೆ ಟ್ಯಾಂಕರ್‌ಗಳು ರಾಜ್ಯಕ್ಕೆ ಆಗಮಿಸಲಿವೆ‌ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು‌.

ಆಕ್ಸಿಜನ್ ಸರಬರಾಜು ಮಾಡಲು ಅನುಕೂಲವಾಗುವಂತೆ 6 ಟ್ಯಾಂಕರ್‌ಗಳನ್ನು ರಾಜ್ಯಕ್ಕೆ ನೀಡಲಾಗಿದೆ. ಧಾರವಾಡ ಜಿಲ್ಲೆಯಿಂದ ಬೆಳಗಾವಿ ಹಾಗೂ ಬಿಜಾಪುರ ಜಿಲ್ಲೆಗಳಿಗೆ ಆಕ್ಸಿಜನ್ ಸರಬರಾಜು ಆಗುವುದರಿಂದ 2 ಟ್ಯಾಂಕರ್ ಗಳನ್ನು ಜಿಲ್ಲೆಗೆ ನೀಡಲಾಗಿದೆ. ಕೇಂದ್ರ ಸರ್ಕಾರ 150 ಆಕ್ಸಿಜನ ಘಟಕಗಳನ್ನು ಕರ್ನಾಟಕ್ಕೆ ಮಂಜೂರು ಮಾಡಿದೆ. 1500 ಆಕ್ಸಿಜನ್ ಸಾಂದ್ರಕಗಳನ್ನು ನೀಡಲಾಗಿದೆ ಎಂದರು.

ಈ ಬಾರಿ ಕೋವಿಡ್ ಅಲೆ ಅನಿರೀಕ್ಷಿತವಾದದ್ದು, ಯಾರು ಊಹಿಸದ ರೀತಿಯಲ್ಲಿ ಇದರ ಪರಿಣಾಮವಾಗುತ್ತಿದೆ. ಇದರ ಸರಪಳಿಯನ್ನು ಮುರಿಯಬೇಕಾಗಿದೆ. ಕೋವಿಡ್ ಸಂದರ್ಭದಲ್ಲಿ ಪೊಲೀಸರು ಬೀದಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಸಹ ನಮ್ಮನಿಮ್ಮಂತೆ ಮನುಷ್ಯರು. ಅನಗತ್ಯವಾಗಿ ಪೊಲೀಸರ ಕಣ್ಣು ತಪ್ಪಿಸಿ ಓಡಾವುದು ಮಾಡಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮನೆಗಳಿಗೆ ತೆರಳಿ 50 ಸಾವಿರ ಕೋವಿಡ್ ಔಷಧ ಕಿಟ್ ವಿತರಣೆ:

ಜಿಲ್ಲೆಯಲ್ಲಿ 25 ರಿಂದ 50 ಸಾವಿರ ಕೋವಿಡ್ ಔಷಧ ಕಿಟ್ ಗಳನ್ನು ತಯಾರಿಸಿ ಮನೆಗಳಿಗೆ ತೆರಳಿ ಹಂಚಲು ತಯಾರಿ ನಡೆಸಲಾಗುತ್ತಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ಔಷದ ಉಗ್ರಾಣದಿಂದ ಅಗತ್ಯ ಇರುವ ಇತರ ಔಷಧಗಳನ್ನು ಪಡೆಯಲು ಇಂಡೆಂಟ್ ಸಲ್ಲಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ABOUT THE AUTHOR

...view details