ಕರ್ನಾಟಕ

karnataka

ETV Bharat / state

14 ಕೊರೊನಾ ಶಂಕಿತರ ಗಂಟಲು ದ್ರವ ಮಾದರಿ ಪರೀಕ್ಷೆಗೆ ರವಾನೆ

ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರೂ ಸೇರಿದಂತೆ 14 ಜನರ ಗಂಟಲು ದ್ರವದ ಮಾದರಿ ರವಾನೆ ಮಾಡಲಾಗಿದೆ. ನಿನ್ನೆ ಮೂವರ ವರದಿ ಬರಬೇಕಿತ್ತು. ಅವು ಸೇರಿದಂತೆ ಒಟ್ಟು 17 ವರದಿಗಳು ಬರಬೇಕಿದೆ.

14 corona suspected samples sent for examination
14 corona suspected samples sent for examination

By

Published : Apr 1, 2020, 10:51 PM IST

ಧಾರವಾಡ: ಜಿಲ್ಲೆಯಲ್ಲಿ 14 ಜನರಲ್ಲಿ ಶಂಕಿತ ಕೊರೊನಾ ಗುಣಲಕ್ಷಣಗಳು ಪತ್ತೆಯಾಗಿದ್ದು, ಈ 14 ಜನರ ಗಂಟಲು ದ್ರವ ಮಾದರಿಯನ್ನು ತಪಾಸಣೆಗಾಗಿ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ. ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರೂ ಸೇರಿದಂತೆ 14 ಜನರ ಗಂಟಲು ದ್ರವದ ಮಾದರಿ ರವಾನೆ ಮಾಡಲಾಗಿದೆ. ನಿನ್ನೆ ಮೂವರ ವರದಿ ಬರಬೇಕಿತ್ತು. ಅವು ಸೇರಿದಂತೆ ಒಟ್ಟು 17 ವರದಿಗಳು ಬರುವುದು ಬಾಕಿ ಇದೆ.

ಒಟ್ಟು 18 ಜನರಿಗೆ ಆಸ್ಪತ್ರೆಯಲ್ಲಿ ಐಸೋಲೇಷನ್​​ನಲ್ಲಿ ಇರಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 511 ಜನರ ಮೇಲೆ ನಿಗಾ ವಹಿಸಲಾಗಿದ್ದು, ಅದರಲ್ಲಿ 83 ಜನರನ್ನು 14 ದಿನಗಳ ಹೋಂ ಐಸೋಲೇಷನ್​ನಲ್ಲಿ ಇರಿಸಲಾಗಿದೆ. 307 ಜನರ 14 ದಿನಗಳ ಹೋಂ ಐಸೋಲೇಷನ್ ಹಾಗೂ 89 ಜನರ 28 ದಿನಗಳ ಹೋಮ್ ಐಸೋಲೇಷನ್ ಪೂರ್ಣಗೊಂಡಿದೆ. ಇಲ್ಲಿಯವರೆಗೆ ಒಟ್ಟು 44 ಜನರಲ್ಲಿ ಕೊರೊನಾ ನೆಗಟಿವ್ ವರದಿ ಬಂದಿದೆ. ಒಬ್ಬರಲ್ಲಿ ಮಾತ್ರ ಪಾಸಿಟಿವ್ ವರದಿ ಬಂದಿದೆ. ಪಾಸಿಟಿವ್ ವ್ಯಕ್ತಿಗೆ ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ABOUT THE AUTHOR

...view details