ಕರ್ನಾಟಕ

karnataka

ETV Bharat / state

ಸ್ಕೇಟಿಂಗ್​ನಲ್ಲಿ ಗಿನ್ನಿಸ್ ದಾಖಲೆ ಬರೆದ 12ರ ಬಾಲಕಿ... ಹುಬ್ಬಳ್ಳಿ ಪೋರಿಗೆ ಇದು 14ನೇ ಸಾಧನೆ! - ಲೆಟೆಸ್ಟ್ ಹುಬ್ಬಳ್ಳಿ ನ್ಯೂಸ್

ಮಕ್ಕಳ ದಿನಾಚರಣೆ ಅಂಗವಾಗಿ, ಹುಬ್ಬಳ್ಳಿಯ 12 ವರ್ಷದ ಓಜಲ್ ಎಸ್. ನೆಲವಡಿ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 51 ಸೆಕೆಂಡ್ ನಲ್ಲಿ 400 ಮೀಟರ್ ಸ್ಕೇಟಿಂಗ್ ಮಾಡುವ ಮೂಲಕ, ಗಿನ್ನಿಸ್​ ದಾಖಲೆ ಬರೆದಿದ್ದಾಳೆ. ಇಲ್ಲಿಯವರೆಗೆ 13 ಸಾಧನೆಗಳನ್ನು ಮಾಡಿರುವ ಬಾಲಕಿ ಓಜಲ್​, ಇದೀಗ 14ನೇ ಸಾಧನೆ ಮೂಲಕ ಗಿನ್ನೀಸ್​ ಪುಸ್ತಕದಲ್ಲಿ ತನ್ನ ಹೆಸರನ್ನು ಸೇರಿಸಿದ್ದಾಳೆ.

ಗಿನ್ನಿಸ್ ದಾಖಲೆ ಮಾಡಿದ 12ರ ಬಾಲಕಿ

By

Published : Nov 14, 2019, 11:26 AM IST

ಹುಬ್ಬಳ್ಳಿ: ಮಕ್ಕಳ ದಿನಾಚರಣೆ ಅಂಗವಾಗಿ, ಹುಬ್ಬಳ್ಳಿಯ 12 ವರ್ಷದ ಓಜಲ್ ಎಸ್. ನೆಲವಡಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 51 ಸೆಕೆಂಡ್ ನಲ್ಲಿ 400 ಮೀಟರ್ ಸ್ಕೇಟಿಂಗ್ ಮಾಡುವ ಮೂಲಕ, ಗಿನ್ನಿಸ್ ದಾಖಲೆ ಬರೆದರು.

ಗಿನ್ನಿಸ್ ದಾಖಲೆ ಮಾಡಿದ 12ರ ಬಾಲಕಿ

ಶಿರೂರು ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿ ವಿಕ್ಟರ್ ಫೆನೆಸ್ ಓಜಲ್​ ಹೆಸರನ್ನು ದಾಖಲಿಸಿಕೊಂಡರು. ಬೆಳ್ಳಂಬೆಳಿಗ್ಗೆ ನಡೆದ ಈ ದಾಖಲೆಗೆ ನೂರಾರು ಮಂದಿ ಸಾಕ್ಷಿಯಾದರು.

ಖಾಸಗಿ ಕಂಪನಿಯ ಸಿಎಫ್ಒ ಆಗಿರುವ ಸುನೀಲ ಎಸ್. ನೆಲವಡಿ ಹಾಗೂ ದೀಪಾ ಎಸ್. ನಲವಡಿ ಅವರ ಪುತ್ರಿಯಾಗಿರುವ ಓಜಲ್, ಏಷ್ಯಾ ಬುಕ್‌ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದಂತೆ, ಇದುವರೆಗೆ ಒಟ್ಟು 13 ದಾಖಲೆಗಳನ್ನು ನಿರ್ಮಿಸಿದ್ದಾಳೆ. ಇದೀಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್ ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾಳೆ. ಇನ್ನು, ಈಕೆಗೆ ಅಕ್ಷಯ್​ ಸೂರ್ಯವಂಶಿ ಎಂಬುವರು ತರಬೇತಿ ನೀಡಿದ್ದರು.

ABOUT THE AUTHOR

...view details