ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಜನರಿಗೆ ಸಕಾಲಕ್ಕೆ ಸಿಗದ '112' ತುರ್ತು ಸೇವೆ

'112 ತುರ್ತು ಸೇವೆ' ಸಾರ್ವಜನಿಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸುವ ಸದುದ್ದೇಶದಿಂದ ಜಾರಿ ಮಾಡಿದ್ದ ಯೋಜನೆ. ಆದರೆ ಈ ಯೋಜನೆಯ ಲಾಭ ಪಡೆಯಬೇಕೆಂದರೆ ಇದೀಗ ಸಾರ್ವಜನಿಕರು ಕೊಂಕಣ ಸುತ್ತಿ ಮೈಲಾರಕ್ಕೆ ಬರಬೇಕಾದಂತಹ ಪರಿಸ್ಥಿತಿ ಇದೆ.

112 Emergency Service
112 ತುರ್ತು ಸೇವೆ

By

Published : Mar 11, 2022, 3:35 PM IST

Updated : Mar 11, 2022, 3:46 PM IST

ಹುಬ್ಬಳ್ಳಿ:ಸರ್ಕಾರ ಸಾರ್ವಜನಿಕರ ಯಾವುದೇ ತುರ್ತು ಸಮಸ್ಯೆಗಳಿದ್ದರೂ ತಕ್ಷಣವೇ ಸ್ಪಂದಿಸಲು ERSS 112 ಸೇವೆ ಜಾರಿ ಮಾಡಿದೆ. ಯೋಜನೆಯೇನೋ ಚೆನ್ನಾಗಿಯೇ ಇದೆ. ಆದರೆ ಇದರ ಲಾಭ ಪಡೆಯಲು ಸಾರ್ವಜನಿಕರು ಪರದಾಡುತ್ತಿದ್ದಾರೆ.


ಹುಬ್ಬಳ್ಳಿಯಿಂದ ಕರೆ ಮಾಡಿದ್ರೆ ಅದು ಸ್ಥಳೀಯ ಕಂಟ್ರೋಲ್ ರೂಮ್​ಗೆ ಹೋಗುವುದಿಲ್ಲ. ಬದಲಿಗೆ ಬೆಂಗಳೂರಿನ ಕೇಂದ್ರ ಕಚೇರಿಗೆ ಹೋಗಿ ಅಲ್ಲಿಂದ ಪುನಃ ಹುಬ್ಬಳ್ಳಿಗೆ ಕನೆಕ್ಟ್ ಆಗುತ್ತದೆ. ಅಷ್ಟರಲ್ಲಿ ಸುಮಾರು ಸಮಯವೇ ಕಳೆದಿರುತ್ತದೆ. ಇದರಿಂದಾಗಿ ಸಾರ್ವಜನಿಕರಿಗೆ ಸಕಾಲಕ್ಕೆ ಸೇವೆ ದೊರೆಯುತ್ತಿಲ್ಲ.

ಇದನ್ನೂ ಓದಿ:ಮತ್ತಷ್ಟು ಸ್ಮಾರ್ಟ್​ ಆದ ಪೊಲೀಸ್​ ಇಲಾಖೆ : ಈ ನೂತನ ಬೆರಳಚ್ಚು ತಂತ್ರಜ್ಞಾನದಿಂದ ಇಲಾಖೆಗೆ ಇನ್ನಷ್ಟು ಶಕ್ತಿ!

ತುರ್ತು ಸಂದರ್ಭದಲ್ಲಿ ಪೊಲೀಸ್ ಸೇವೆ ಸೇರಿದಂತೆ ಇನ್ನಿತರ ಸೇವೆಗಳನ್ನು ಒದಗಿಸಲು 112 ಸೇವೆಯನ್ನು ಒದಗಿಸಲಾಗಿದೆ. ಆದರೆ ಸರ್ಕಾರ ಈ ಬಗ್ಗೆ ಕಾಳಜಿವಹಿಸದೇ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲಿ ಮಾಡಿದ್ದು, ಜನರ ಸಮಸ್ಯೆಗೆ ತಕ್ಷಣ ಸೇವೆ ಸಿಗದಂತಾಗಿದೆ.

Last Updated : Mar 11, 2022, 3:46 PM IST

For All Latest Updates

TAGGED:

ABOUT THE AUTHOR

...view details