ಕರ್ನಾಟಕ

karnataka

ETV Bharat / state

ಧಾರವಾಡ: ಆ್ಯಂಬುಲೆನ್ಸ್​ನಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಚಾಲಕ! - ಧಾರವಾಡ ಇತ್ತೀಚಿನ ಸುದ್ದಿ

108 ಆ್ಯಂಬ್ಯುಲೆನ್ಸ್​ನಲ್ಲಿ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಚಾಲಕನೇ ಆಕೆಗೆ ಹೆರಿಗೆ ಮಾಡಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಆ್ಯಂಬುಲೆನ್ಸ್​ನಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ ಚಾಲಕ
ಆ್ಯಂಬುಲೆನ್ಸ್​ನಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ ಚಾಲಕ

By

Published : Oct 12, 2020, 6:46 AM IST

ಧಾರವಾಡ: ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ 108 ಆ್ಯಂಬ್ಯುಲೆನ್ಸ್​ನಲ್ಲಿ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಚಾಲಕನೇ ಆಕೆಗೆ ಹೆರಿಗೆ ಮಾಡಿಸಿದ ಘಟನೆ ಮುಗದ ಗ್ರಾಮದ ಬಳಿ ನಡೆದಿದೆ.

ರಿಜ್ವಾನಾ ಕಾಸಿಂ ಬೆಟಗೇರಿ ಎಂಬ ಗರ್ಭಿಣಿಗೆ ಹೆರಿಗೆ ಮಾಡಿಸಲಾಗಿದೆ. ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಆದರೆ ಧಾರವಾಡ ಜಿಲ್ಲಾಸ್ಪತ್ರೆಗೆ ಬರುವ ಮುನ್ನವೇ ಹೆರಿಗೆಯಾಗಿದೆ. ವಾಹನ ಚಾಲಕ ಲೋಕೆಶ್​ ಪಾಟೀಲ್ ಎಂಬುವವರು ಹೆರಿಗೆ ಮಾಡಿಸಿದ್ದಾರೆ.

ಸದ್ಯ ರಿಜ್ವಾನಾ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ABOUT THE AUTHOR

...view details