ಕರ್ನಾಟಕ

karnataka

ETV Bharat / state

ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದ 10 ವರ್ಷದ ಬಾಲಕ ಅಪಘಾತದಲ್ಲಿ ಸಾವು

ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದ ಧಾರವಾಡದ 10 ವರ್ಷದ ಬಾಲಕ ಮೃತ, ಘಟನೆಯಲ್ಲಿ ಮೂವರಿಗೆ ಗಬೀರ ಗಾಯಗಳಾಗಿವೆ.

10 year old boy died in an accident
10 ವರ್ಷದ ಬಾಲಕ ಅಪಘಾತದಲ್ಲಿ ಸಾವು

By

Published : Jan 4, 2023, 4:34 PM IST

ಧಾರವಾಡ :ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದ ಧಾರವಾಡದ 10 ವರ್ಷದ ಬಾಲಕನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಧಾರವಾಡ ಸೈದಾಪುರದ ಸುಮಿತ್ ಪಾಂಡೆ ಎಂಬ 10 ವರ್ಷದ ಬಾಲಕ ಮೃತಪಟ್ಟಿದ್ದು, ಇನ್ನೂ ಮೂವರಿಗೆ ಈ ಅಪಘಾತದಲ್ಲಿ ತೀವ್ರ ಗಾಯಗಳಾಗಿವೆ.

ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಒಂದು ಎಲ್ಲ ಕಡೆಯಿಂದಲೂ ಭಕ್ತರ ಒಂದು ದೊಡ್ಡ ಸಾಗರವೇ ಇದ್ದು, ಅಕ್ಟೊಂಬರ್​ ತಿಂಗಳಿನಲ್ಲಿ ದರ್ಶನಕ್ಕೆ ಪಡೆಯಲು ಶುರುವಾದರೆ ಮಕರ ಸಕ್ರಾಂತಿ ಹಬ್ಬದ ವರೆಗೆ ಸಾಗರೋಪಾದಿಯಲ್ಲಿ ಭಕ್ತರು ತಮ್ಮ ಬೇಡಿಕೆಗಳನ್ನು ಹೊತ್ತು ಇರುಮುಡಿ ಜೊತೆ ಸನ್ನಿಧಿಗೆ ಹೋಗುತ್ತಾರೆ. ಇಂತಹುದೇ ಭಕ್ತರ ಒಂದು ಸಮೂಹ ಧಾರವಾಡದ ಸೈದಾಪುರದಿಂದ ಜ.1 ರಂದು ಶಬರಿ ಮಲೆಗೆ ದರ್ಶನ ಪಡೆಯಲು ಹೊರಟಿತ್ತು.

ನೆಮ್ಮದಿಯಾಗಿ ಸ್ವಾಮಿಯನ್ನು ಕಂಡು ತಮ್ಮ ತಮ್ಮ ಬೇಡಿಕೆಗಳನ್ನು ಕೋರಿಕೊಂಡು ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಕೇರಳದ ಮಣ್ಣಪರಂ ಜಿಲ್ಲೆಯ ಯಡಪ್ಪಾಲ ಎಂಬಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಈ ಘಟನೆ ಪರಿಣಾಮದಿಂದಾಗಿ ಸುಮಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸೂರಜ್ ಪಾಂಡೆ, ನಿಖಿಲ್ ಪಾಂಡೆ ಹಾಗೂ ಸುಶಾಂತ ಪಾಂಡೆ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಪಂದಿಸಿದ ಕೇಂದ್ರ ಸಚಿವರು:ಅಪಘಾತವಾಗಿರುವ ವಿಷಯ ತಿಳಿಯುತಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕೇರಳದ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಅಲ್ಲದೇ ಮೃತ ಸುಮಿತ್ ಪಾಂಡೆ ಪಾರ್ಥೀವ ಶರೀರವನ್ನು ಧಾರವಾಡಕ್ಕೆ ತರುವ ವ್ಯವಸ್ಥೆ ಮಾಡಲಾಗುತ್ತಿದೆ.

ಇಂದು ನಡೆದಿರುವ ಅಪಘಾತವೇನು ಮೊದಲಲ್ಲ:ಈ ಹಿಂದೆಯೂ ಸಹಾ ಡಿಸೆಂಬರ್​ ತಿಂಗಳ 12 ರಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರುಳುತ್ತಿದ್ದ ಕರ್ನಾಟಕದ ಮಿನಿ ಬಸ್​ ಕೇರಳದ ಕೋಯಿಕ್ಕೋಡ್​ ಜಿಲ್ಲೆಯಲ್ಲಿ ವಡಕರ ಕುಂಜಿಪಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಕೆಲ ಭಕ್ತರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ರಾಜ್ಯದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್​ ಎದುರಿನಿಂದ ಬಂದ ಪಿಕಪ್​ ವಾಹನಕ್ಕೆ ಡಿಕ್ಕಿಯಾಗಿ ಸಂಪೂರ್ಣ ಜಖಂಗೊಂಡಿತ್ತು. ಇದರಿಂದಾಗಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ಬಳಿಕ 15 ಪ್ರಯಾಣಿಕರಿಗೆ ಶಬರಿಮಲೆಗೆ ತೆರಳಲು ವಾಹನ ಸೌಕರ್ಯ ಮಾಡಿಕೊಡುವುದಾಗಿ ಕೇರಳ ಪೊಲೀಸರು ತಿಳಿಸಿದ್ದರು.

ನೆರೆ ರಾಜ್ಯದಲ್ಲೂ ಅಪಘಾತ:ಪಕ್ಕದ ತಮಿಳುನಾಡಿನಲ್ಲೂ ಕರ್ನಾಟಕದ ಅಯ್ಯಪ್ಪನ ಭಕ್ತರು ಶಬರಿ ಮಲೆಗೆ ತೆರೆಳುವಾಗ ಅಪಘಾತ ನಡೆದಿತ್ತು. ದರ್ಶನಕ್ಕೆ ಎಂದು ರಾಜ್ಯದ ಸುಮಾರು 20 ಮಂದಿ ಭಕ್ತರು ಪ್ರಯಾಣ ಬೆಳೆಸುತ್ತಿರುವಾಗ ತಮಿಳುನಾಡಿನ ವೆದಸಂಡೂರ್​ನ ದಿಂಡಿಗಲ್​ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಪರಿಣಾಮ ಒಬ್ಬ ಅಯ್ಯಪ್ಪ ಭಕ್ತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಉಳಿದ ಇಬ್ಬರು ಗಾಯಾಗೊಂಡವರನ್ನು ದಿಂಡಿಗಲ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಗೂ ಈ ಕುರಿತು ಮಾತನಾಡಿದ ಜಿಲ್ಲೆಯ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಅಪಘಾತವಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ಇದನ್ನೂ ಓದಿ :ಗೋವಾದಿಂದ ಹೊಸ ವರ್ಷಾಚರಣೆ ಮುಗಿಸಿ ಬರುತ್ತಿದ್ದ ಕಾರು ಅಪಘಾತ: ನಾಲ್ವರು ಇಂಜಿನಿಯರಿಂಗ್​ ವಿದ್ಯಾರ್ಥಿಗಳು ಸಾವು

ABOUT THE AUTHOR

...view details