ದಾವಣಗೆರೆ:ಇಲ್ಲಿನ ಯುವ ಬಿಗೇಡ್ನ ಯುವಕರ ತಂಡ ಸದ್ದಿಲ್ಲದೇ ಸಮಾಜ ಸೇವೆ ಮಾಡುತ್ತಿದ್ದಾರೆ. ಪ್ರತಿ ವಾರಕ್ಕೆ ಒಂದು ದಿನದ ಕಾರ್ಯಕ್ರಮ ಹಾಕಿಕೊಳ್ಳುವ ಇವರು ದೇವಾಲಯ, ಕೆರೆ ಶಾಲೆಗಳಿಗೆ ಕಾಯಕಲ್ಪ ಒದಗಿಸುತ್ತಿದ್ದಾರೆ. ತಾನಾಯಿತು ತನ್ನ ಕೆಲಸವಾಯಿತು ಎನ್ನುವ ಈ ಕಾಲದಲ್ಲಿ ವಾರ ಪೂರ್ತಿ ಕೆಲಸಕ್ಕೆ ಹೋಗಿ ಭಾನುವಾರದ ಇಡೀ ದಿನ ಸಮಾಜದ ಸ್ವಚ್ಚತೆಗೆ ಮುಡಿಪಾಗಿಟ್ಟಿದ್ದಾರೆ. ಯುವ ಬ್ರಿಗೇಡ್ನ ಹತ್ತಕ್ಕೂ ಹೆಚ್ಚು ಯುವಕರು ಪ್ರತಿ ವಾರ ಒಂದೊಂದು ಕಾರ್ಯಕ್ರಮ ಹಮ್ಮಿಕೊಂಡು ಸ್ವಚ್ಚತೆ ಮಾಡುತ್ತಾ ಬಂದಿದ್ದಾರೆ.
ಈ ತಂಡ ದಾವಣಗೆರೆಯ ಕೂಗಳತೆ ದೂರದಲ್ಲಿರುವ ಬೇತೂರು ಗ್ರಾಮದ 1,200 ವರ್ಷಗಳ ಪುರಾತನ ಕಲ್ಲೇಶ್ವರ ದೇವಾಲಯಕ್ಕೆ ಹೊಸ ಲುಕ್ ನೀಡಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನವು ಪಾಳು ಬಿದ್ದಿತ್ತು. ಆದರೆ, ಯುವ ಬ್ರಿಗೇಡ್ನ ಯುವಕರು ಕಲ್ಲೇಶ್ವರ ದೇವಾಲಯದ ಸುತ್ತ ಸ್ವಚ್ಛತೆ ಮಾಡಿ ನಿತ್ಯ ಪೂಜೆ ಸಲ್ಲಿಸುವ ಹಾಗೇ ಕಾಯಕಲ್ಪ ನೀಡಿದ್ದಾರೆ.