ಹರಿಹರ: ಗಂಭೀರ ಗಾಯದಿಂದ ನರಳುತ್ತಿದ್ದ ಕೋತಿಗೆ ಚಿಕಿತ್ಸೆ ಕೊಡಿಸುವ ಮೂಲಕ ಯುವಕರ ತಂಡವೊಂದು ಮಾನವೀಯತೆ ಮೆರೆದಿದೆ.
ಗಾಯಗೊಂಡಿದ್ದ ಕೋತಿಗೆ ಚಿಕಿತ್ಸೆ ಕೊಡಿಸಿದ ಹರಿಹರ ಹುಡುಗ್ರು.. ಇವರ ಮಾನವೀಯತೆಗೆ ಭೇಷ್ ಎಂದ ಜನ - Youths treated the monkey at Davanagere
ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಯುವಕರು ಗಂಭೀರ ಗಾಯದಿಂದ ನರುಳುತ್ತಿದ್ದ ಕೋತಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಯುವಕರು ಗಂಭೀರ ಗಾಯದಿಂದ ನರುಳುತ್ತಿದ್ದ ಕೋತಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಜೀವ ಉಳಿಸಿದ್ದಾರೆ.
ಅಕ್ಟೋಬರ್ 4ರಂದು ರಾತ್ರಿ 10 ಗಂಟೆಯ ಸುಮಾರಿಗೆ ಹನಗವಾಡಿ ಗ್ರಾಮದ ಆಟೋ ಕೆಂಚಪ್ಪ ಅವರ ಮನೆಯ ಮೇಲೆ ಕೋತಿ ಬಂದು ಕುಳಿತಾಗ, ಅದರ ಮೇಲೆ ಗಂಭೀರ ಗಾಯಗಳು ಕಂಡು ಬಂದಿದೆ. ಈ ವೇಳೆ ಸ್ಥಳೀಯ ಯುವಕರು ಅದನ್ನು ಹಿಡಿದು ಪಶು ಆರೋಗ್ಯ ಕೇಂದ್ರದ ವೈದ್ಯರಾದ ಆರಾಧ್ಯ ಅವರಿಂದ ತಮ್ಮ ಸ್ವಂತ ಹಣದಿಂದ ಚಿಕಿತ್ಸೆ ಕೊಡಿಸಿದ್ದಾರೆ. ಯುವಕರಾದ ಬರಮಪ್ಪ, ಕುಮಾರ್, ಕೆಂಚಪ್ಪ, ಮಂಜು, ಬಸವರಾಜ್, ಬಿ.ಜೆ ಬಸವನಗೌಡ, ಅರುಣ್ ಕೂನಾರ್, ವೆಂಕಟೇಶ್, ಚಮನ್, ನಾಗರಾಜ್, ಸಂಜು, ಉಮೇಶ್,ಹಾಲಸ್ವಾಮಿ, ಲಿಂಗರಾಜ್, ಮಾರುತಿ ಮಾನವೀಯತೆ ಮೆರೆದ ಯುವಕರು.