ದಾವಣಗೆರೆ: ರಾಜ್ಯದಲ್ಲಿ ಸಾವರ್ಕರ್ ಕುರಿತು ಪರ ವಿರೋಧ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಕೆಲ ಹಿಂದೂ ಪರ ಸಂಘಟನೆಗಳು ಗಣೇಶನ ಬಳಿ ಇರಿಸಲು ಬಾಲಗಂಗಾಧರ್ ತಿಲಕ್ ಮತ್ತು ವಿ ಡಿ ಸಾವರ್ಕರ್ ರವರ ಫೋಟೊಗಳನ್ನು ಹಂಚಿದ್ದರು. ಗಣೇಶನ ಬಳಿ ಸಾವರ್ಕರ್ ಫೋಟೊ ಇರಿಸಿರುವುದನ್ನು ಖಂಡಿಸಿ ನಗರದ ಕೆಲ ಯುವಕರು ಗಣೇಶನ ಬಳಿ ಇರಿಸಲು ಅಂಬೇಡ್ಕರ್ ಹಾಗೂ ಬಸವಣ್ಣನವರ ಫೋಟೊಗಳನ್ನು ಹಂಚಿದ್ದಾರೆ.
ಸಾವರ್ಕರ್ ಫೋಟೊ ವಿವಾದ.. ಅಂಬೇಡ್ಕರ್, ಬಸವಣ್ಣ ಫೋಟೊ ಹಂಚಿದ ಯುವಕರು - ಸಾವರ್ಕರ್ ಫೋಟೊ ವಿವಾದ
ಗಣೇಶನ ಟೆಂಟ್ಗಳಲ್ಲಿ ಸಾವರ್ಕರ್ ಫೋಟೋ ಇರಿಸಿರುವುದನ್ನು ಖಂಡಿಸಿ ದಾವಣಗೆರೆ ಗಾಂಧಿನಗರದಲ್ಲಿ ಕೆಲ ಯುವಕರು ಗಣೇಶನ ಬಳಿ ಇರಿಸಲು ಅಂಬೇಡ್ಕರ್ ಮತ್ತು ಬಸವಣ್ಣ ಅವರ ಫೋಟೋಗಳನ್ನು ಹಂಚಿದ್ದಾರೆ.
ಸಾವರ್ಕರ್ ಪೋಟೊ ವಿವಾದ.. ಅಂಬೇಡ್ಕರ್ ಮತ್ತು ಬಸವಣ್ಣನವರ ಫೋಟೊ ಹಂಚಿದ ಯುವಕರು
ನಗರದ ಹಲವೆಡೆ ಗಣೇಶನನ್ನು ಪ್ರತಿಷ್ಠಾಪಿಸಿದ ಸ್ಥಳಗಳಲ್ಲಿ ಅಂಬೇಡ್ಕರ್ ವಿರೋಧಿ ಮತ್ತು ಸಂವಿಧಾನ ವಿರೋಧಿಯಾದ ಸಾವರ್ಕರ್ ಪೋಟೊ ಇಟ್ಟಿರುವುದನ್ನು ಖಂಡಿಸಿದ ಯುವಕರು, ಯುವ ಮುಖಂಡ ಚಿರಂಚೀವಿ ಅವರ ನೇತೃತ್ವದಲ್ಲಿ ಅಂಬೇಡ್ಕರ್ ಹಾಗು ಬಸವಣ್ಣನವರ ಫೋಟೊವನ್ನು ಹಂಚಿದ್ದಾರೆ. ನೂರಾರು ಗಣೇಶೋತ್ಸವದ ಸಮಿತಿಗಳಿಗೆ ಅಂಬೇಡ್ಕರ್ ಹಾಗು ಬಸವಣ್ಣನವರ ಫೋಟೊಗಳನ್ನು ಹಂಚಲಾಗಿದ್ದು, ಇದಕ್ಕೆ ಯುವ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದರು.
ಇದನ್ನೂ ಓದಿ :ಸಾವರ್ಕರ್ ಫೋಟೋ ವಿವಾದಕ್ಕೆ ಪಾಲಿಕೆ ಬ್ರೇಕ್.. ಏಕಾಏಕಿ ಫೋಟೋ ಫ್ಲೆಕ್ಸ್ ತೆರವು