ಕರ್ನಾಟಕ

karnataka

ETV Bharat / state

ಕಬಡ್ಡಿ ಚಾಂಪಿಯನ್ ಶಿಪ್​ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಿದ ಉದಯೋನ್ಮುಖ ಪ್ರತಿಭೆಗಳು: ಹೇಗಿತ್ತು ಗೊತ್ತಾ ಕಬಡ್ಡಿ ಕಾದಾಟ.. - ಈಟಿವಿ ಭಾರತ್ ಕನ್ನಡ ಸುದ್ದಿ

ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಜರುಗಿದ ಕಬಡ್ಡಿ ಕಾದಾಟ ಕಬ್ಬಡಿ ಪ್ರೇಮಿಗಳಿಗಳಿಗೆ ರಸದೌತಣ ಉಣಬಡಿಸಿತು. ಯುವಕ ಹಾಗೂ ಯುವತಿ ಕಬಡ್ಡಿ ಯುವ ಕ್ರೀಡಾಪಟುಗಳು ಶ್ರಮ ಹಾಕಿ ಕಬಡ್ಡಿ ಕಾದಾಟ ನಡೆಸಿದ್ದರಿಂದ ಇಡೀ ಜನರು ಹಾಗು ಯುವಕರು ಕೇಕೆ ಶಿಳ್ಳೆ ಹಾಕುವ ಮೂಲಕ ಯುವ ಕ್ರೀಡಾಪಟುಗಳಿಗೆ ಹುರಿದುಂಬಿಸಿದರು.

ದೇಸಿ ಕ್ರೀಡೆ ಕಬ್ಬಡಿ ಪಂದ್ಯಾವಳಿ
ದೇಸಿ ಕ್ರೀಡೆ ಕಬ್ಬಡಿ ಪಂದ್ಯಾವಳಿ

By

Published : Jan 17, 2023, 3:41 PM IST

Updated : Jan 17, 2023, 4:02 PM IST

ಶಾಸಕ ಎಸ್​ ವಿ ರಾಮಚಂದ್ರ ಅವರು ಮಾತನಾಡಿದರು

ದಾವಣಗೆರೆ:ಅವರು ಉದಯೋನ್ಮುಖ ಪ್ರತಿಭೆಗಳು, ದೂರದ ಊರುಗಳಿಂದ ಪ್ರಶಸ್ತಿಯ ಕನಸು ಕಟ್ಟಿಕೊಂಡು ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಆ ಪ್ರತಿಭೆಗಳು ದೇಸಿ ಕ್ರೀಡೆ ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸಿದರು. ‌ರಾಜ್ಯಮಟ್ಟದ ಈ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ನೂರಾರು ಯುವಕ ಯುವತಿಯರು‌ ಭಾಗಿಯಾಗಿ ತಮ್ಮ ಪ್ರತಿಭೆಯನ್ನು ಹೊರಹಾಕಿದ್ರು.

ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಜರುಗಿದ ಕಬಡ್ಡಿ ಕಾದಾಟ ಕಬ್ಬಡಿ ಪ್ರೇಮಿಗಳಿಗಳಿಗೆ ರಸದೌತಣ ಉಣಬಡಿಸಿತು. ಯುವಕ ಹಾಗೂ ಯುವತಿ ಕಬಡ್ಡಿ ಯುವ ಕ್ರೀಡಾಪಟುಗಳು ಶ್ರಮ ಹಾಕಿ ಕಬಡ್ಡಿ ಕಾದಾಟ ನಡೆಸಿದ್ದರಿಂದ ಇಡೀ ಜನರು ಹಾಗೂ ಯುವಕರು ಕೇಕೆ ಶಿಳ್ಳೆ ಹಾಕುವ ಮೂಲಕ ಯುವ ಕ್ರೀಡಾಪಟುಗಳಿಗೆ ಹುರಿದುಂಬಿಸಿದರು.

ಶಾಸಕ ಎಸ್ ವಿ ರಾಮಚಂದ್ರ ಅಭಿಮಾನಿಗಳ ಬಳಗದಿಂದ ಆಯೋಜನೆ : ಕರ್ನಾಟಕ ರಾಜ್ಯ ಹಾಗೂ ದಾವಣಗೆರೆ ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಮತ್ತು ಶಾಸಕ ಎಸ್ ವಿ ರಾಮಚಂದ್ರ ಅಭಿಮಾನಿಗಳ ಬಳಗದಿಂದ ಆಯೋಜನೆ ಮಾಡಲಾಗಿದ್ದ ಕಬಡ್ಡಿಯಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಂದ ಯುವಕ ಯುವತಿಯರು ಭಾಗಿಯಾಗಿ ಕಬ್ಬಡಿ ಯುವ ಪ್ರತಿಭೆಗಳು ಶ್ರಮ ಹಾಕಿ ಸೆಣಸಾಟ ನಡೆಸಿದರು.

ಚಪ್ಪಳೆ ಶಿಳ್ಳೆ ಹಾಕುವ ಮೂಲಕ ಹುರಿದುಂಬಿಸಿದ ಅಭಿಮಾನಿಗಳು:ಯುವತಿಯರ ಆಟ ನೋಡಿ ಗಂಡ್ ಹೈಕ್ಳು ಚಪ್ಪಾಳೆ ಶಿಳ್ಳೆ ಹಾಕುವ ಮೂಲಕ ಹುರಿದುಂಬಿಸಿದರು. ಇನ್ನು ಈ ಕಬಡ್ಡಿ ಚಾಂಪಿಯನ್ ಶಿಪ್​ಗೆ ದಾವಣಗೆರೆ, ‌ಹಾವೇರಿ, ಶಿವಮೊಗ್ಗ, ಬೆಳಗಾವಿ, ವಿಜಯಪುರ, ಉಡುಪಿ, ದ ಕನ್ನಡ, ಧಾರವಾಡ, ‌ಕೊಡಗು, ಮಂಡ್ಯ, ಹಾಸನ, ಚಿತ್ರದುರ್ಗ ಹೀಗೆ ರಾಜ್ಯದಿಂದ ಒಟ್ಟು 50 ಕ್ಕೂ ಹೆಚ್ಚು ತಂಡಗಳು ಆಗಮಿಸಿದವು.

ಮೂರು ದಿನಗಳ ಕಾಲ ಜರುಗಲಿದೆ ಕಬಡ್ಡಿ ಚಾಂಪಿಯನ್​ಶಿಪ್​:ಈ ಎಲ್ಲಾ ಕಬ್ಬಡಿ ತಂಡಗಳ ಪೈಕಿ ಒಂದು ಜಿಲ್ಲೆಯ ಯುವಕ ಹಾಗೂ ಯುವತಿಯರು ಪ್ರತ್ಯೇಕವಾಗಿ ಎರಡು ತಂಡಗಳಿಗೆ ಈ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತು. ಇಂದು ಆರಂಭವಾಗಿರುವ ಈ ಕಬಡ್ಡಿ ಚಾಂಪಿಯನ್ ಶಿಪ್ ಒಟ್ಟು ಮೂರು ದಿನಗಳ ಕಾಲ ಜರುಗಲಿದೆ ಎಂದು ಶಾಸಕ ಎಸ್ ವಿ ರಾಮಚಂದ್ರ ತಿಳಿಸಿದರು.

ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆ: ಇನ್ನು ಕಬಡ್ಡಿ ಚಾಂಪಿಯನ್ ಶಿಪ್​ನಲ್ಲಿ ಒಟ್ಟು 700 ಜನ ಯುವ ಕಬಡ್ಡಿ ಕ್ರೀಡಾಪಟುಗಳು ಭಾಗಿಯಾಗಿದ್ದರು. ಈ ರಾಜ್ಯಮಟ್ಟದ ಕಬಡ್ಡಿ ಚಾಂಪಿಯನ್ ಶಿಪ್​ನಲ್ಲಿ ನ್ಯಾಷನಲ್​​ಗೆ ಒಟ್ಟು 24 ಜನರನ್ನು ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಅಂದರೆ ಯುವಕರ 12 ಜನರನ್ನು ಹಾಗೂ ಯುವತಿಯರನ್ನು 12 ಜನರನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ಸೋನಿಪತ್​ನಲ್ಲಿ ಜರುಗುವ ನ್ಯಾಷನಲ್ ಕಬಡ್ಡಿ ಪಂದ್ಯದಲ್ಲಿ ಕರ್ನಾಟಕದ ಪರ ಆಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಕಾರ್ಯದರ್ಶಿ ಮುನಿರಾಜು ತಿಳಿಸಿದರು.

ಕಬ್ಬಡಿ ಪ್ರೇಮಿಗಳಿಗೆ ರಂಜನೆ: ಒಟ್ಟಾರೆ ಇಂದಿನಿಂದ ಒಟ್ಟು ಮೂರು ದಿನಗಳ ಕಾಲ ಜರುಗುವ ಈ ರಾಜ್ಯ ಮಟ್ಟದ ಕಬ್ಬಡಿ ಚಾಂಪಿಯನ್ ಶಿಪ್​ನಲ್ಲಿ ನ್ಯಾಷನಲ್​ಗೆ ಆಯ್ಕೆಯಾಗಲು ಯುವ ಕಬ್ಬಡಿ ಪಟುಗಳು ಅದ್ಭುತ ಪ್ರದರ್ಶನ ನೀಡಿದ್ರು. ಅದೇನೆ ಆಗಲಿ ಕೊರೆಯುವ ಚಳಿಯಲ್ಲೂ ಕಬಡ್ಡಿ ಆಟವಾಡುವ ಮೂಲಕ ಯುವ ಕ್ರೀಡಾಪಟುಗಳು ತಮ್ಮ ಶಕ್ತಿ ಪ್ರದರ್ಶನ ಮಾಡುವ ಮೂಲಕ ಕಬಡ್ಡಿ ಪ್ರೇಮಿಗಳಿಗೆ ರಂಜಿಸಿದಂತೂ ಸುಳ್ಳಲ್ಲ.

ಓದಿ:ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಮಲೆನಾಡಿನ ಪ್ರತಿಭೆ ಅದಿತಿ ರಾಜೇಶ್ ಆಯ್ಕೆ

Last Updated : Jan 17, 2023, 4:02 PM IST

ABOUT THE AUTHOR

...view details