ದಾವಣಗೆರೆ: ಯುವಕರು ಫೋಟೋಶೂಟ್ ಗೀಳಿಗೆ ಬಿದ್ದು ಎಡವಟ್ಟು ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದ ಬಳಿ ಇರುವ ದೇವರಬೆಳಕೆರೆ ಪಿಕಪ್ ಡ್ಯಾಂನ ಬ್ರಿಡ್ಜ್ ಬಳಿ ನಡೆದಿದೆ ಎನ್ನಲಾಗ್ತಿದೆ. ಸದ್ಯ ವಿಡಿಯೋ ವೈರಲ್ ಆಗಿದೆ.
ಕೈಯಲ್ಲಿ ಮಚ್ಚು ಹಿಡಿದು ರಸ್ತೆಯಲ್ಲಿ ಓಡಾಡುತ್ತಾ ಫೋಟೋ ಶೂಟ್ಗೆ ಇಳಿದಿರುವುದು ಆತಂಕಕ್ಕೆ ಕಾರಣವಾಗಿತ್ತು. ಮಚ್ಚು ಕೈಯಲ್ಲಿ ಹಿಡಿದು ಯುವಕರು ಓಡಾಟ ಮಾಡುತ್ತಾ ದೇವರ ಬೆಳಕೆರೆ ಡ್ಯಾಮ್ ನ ಬ್ರಿಡ್ಜ್ ಮೇಲೆ ಫೋಟೋ ಶೂಟ್ಗೆ ಇಳಿದಿದ್ದನ್ನು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.