ದಾವಣಗೆರೆ/ಹರಿಹರ: ಹರಿಹರದ ಯುವಕರು ವಿವಿಧ ನಗರಗಳಿಗೆ ಉದ್ಯೋಗ ಹುಡುಕಿಕೊಂಡು ಹೋಗಿದ್ದ ಕೂಲಿ ಕಾರ್ಮಿಕರನ್ನ ತಮ್ಮ ವಾಹನದ ಮೂಲಕ ಅವರವರ ಮನೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಕೂಲಿ ಕಾರ್ಮಿಕರನ್ನ ಅವರವರ ಮನೆ ತಲುಪಿಸಿ ಮಾನವೀಯತೆ ಮೆರೆದ ಹರಿಹರದ ಯುವಕರು - Shikaripur in Shimoga district
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿಗೆ ಕೆಲಸಕ್ಕೆಂದು ಬಂದಿದ್ದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ 11 ಜನರನ್ನ ಹರಿಹರದ ಯುವಕರು, ತಮ್ಮ ವಾಹನದ ಮೂಲಕ ಅವರವರ ಮನೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶವನ್ನು ಲಾಕ್ಡೌನ್ ಮಾಡಿದೆ. ಈ ಮುಂಚೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ 11 ಜನರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿಗೆ ಕೆಲಸಕ್ಕೆಂದು ಆಗಮಿಸಿದ್ದರು. ಬಳಿಕ ತಮ್ಮ ಸ್ವಂತ ಊರುಗಳಿಗೆ ಹೋಗಲು ವಾಹನಗಳು ಇಲ್ಲದೆ ಕಾಲ್ನಡಿಗೆಯಲ್ಲಿಯೇ ತಮ್ಮ ತಮ್ಮ ಊರು ತಲುಪಲು ಪ್ರಯತ್ನಿಸಿದ ಕೂಲಿ ಕಾರ್ಮಿಕರು, ಬಿಸಿಲಿನ ತಾಪ ಹಾಗೂ ಆಹಾರದ ಕೊರತೆಯಿಂದ ತಲೆ ಸುತ್ತಿ ರಸ್ತೆಯಲ್ಲಿಯೇ ಬಿದ್ದಿದ್ದಾರೆ.
ಇದನ್ನು ಕಂಡ ಹರಿಹರ ಯುವಕರು ಅವರಿಗೆ ಆಹಾರ ನೀಡಿ ವಾಹನ ಸೌಲಭ್ಯ ಮಾಡಿ ಅವರ ಗ್ರಾಮಗಳಿಗೆ ಕಳಿಸಿಕೊಟ್ಟಿದ್ದಾರೆ.