ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಯುವಕ ಆತ್ಮಹತ್ಯೆ: ಮದುವೆಯಾಗದ ಖಿನ್ನತೆ ಶಂಕೆ - man committed to suicide

ತನಗೆ ಮದುವೆಯಾಗಿಲ್ಲ ಎಂದು ಮಾನಸಿಕ ಖಿನ್ನತೆಗೊಳಗಾದ ಯುವಕ ತನ್ನ ಪೌಲ್ಟ್ರೀ ಫಾರ್ಮ್‌ನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

young man who committed to suicide; case registered
ಆತ್ಮಹತ್ಯೆಗೆ ಶರಣಾದ ಯುವಕ; ಪ್ರಕರಣ ದಾಖಲು

By

Published : Dec 1, 2020, 1:20 PM IST

ದಾವಣಗೆರೆ: ವಿವಾಹವಾಗಿ ಸುಂದರ ಜೀವನ ಸಾಗಿಸಬೇಕೆಂಬ ಕನಸು ಕಂಡಿದ್ದ ಯುವಕ ಇದೀಗ ತನಗೆ ಮದುವೆಯಾಗಿಲ್ಲ ಎಂದು ಕೊರಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ‌. ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ವೀರೇಶ್ (32) ಆತ್ಮಹತ್ಯೆ ಮಾಡಿಕೊಂಡ ಯುವಕ. ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿರುವ ಪೌಲ್ಟ್ರಿ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಈತ ಮೂಲತಃ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹರಕನಾಳ್ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ:ಪೂರ್ಣ ಪ್ರಮಾಣದ ಅವಧಿಗೆ ಬಿಎಸ್​ವೈ ಸಿಎಂ ಆಗಿರುತ್ತಾರೆ : ಸಚಿವ ಬಸವರಾಜ ಬೊಮ್ಮಾಯಿ

ಈ ಕುರಿತು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details