ಕರ್ನಾಟಕ

karnataka

ETV Bharat / state

ಸಂವಿಧಾನ ನಮಗೆ ಮೂಲ‌ಗ್ರಂಥ ಆಗಬೇಕು, ಅದನ್ನು ರಕ್ಷಿಸುವ, ಉಳಿಸುವ ಕೆಲಸ ಮಾಡಬೇಕು: ಯತೀಂದ್ರ ಸಿದ್ದರಾಮಯ್ಯ - ಅಹಿಂದ

ಸಂವಿಧಾನ ನಮಗೆ ಮೂಲ‌ಗ್ರಂಥ ಆಗಬೇಕು ಅದರಿಂದ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ

By ETV Bharat Karnataka Team

Published : Jan 3, 2024, 6:28 PM IST

Updated : Jan 3, 2024, 8:03 PM IST

ಸಂವಿಧಾನ ನಮಗೆ ಮೂಲ‌ಗ್ರಂಥ ಆಗಬೇಕು: ಯತೀಂದ್ರ ಸಿದ್ದರಾಮಯ್ಯ

ದಾವಣಗೆರೆ: ಸಂವಿಧಾನ ನಮಗೆ ಮೂಲ‌ಗ್ರಂಥವಾಗಬೇಕು, ಅದನ್ನು ರಕ್ಷಿಸುವ, ಉಳಿಸುವ ಕೆಲಸ ನಾವು ಮಾಡ್ಬೇಕಾಗಿದೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅಹಿಂದ ಸಮುದಾಯಗಳಿಗೆ ಸಂದೇಶ ರವಾನಿಸಿದರು.

ದಾವಣಗೆರೆ ತಾಲೂಕಿನ ರುದ್ರನಕಟ್ಟೆ ಗ್ರಾಮದಲ್ಲಿ ಇಂದು ಮಾತನಾಡಿದ ಅವರು, ಜಾತಿ ವ್ಯವಸ್ಥೆಯಲ್ಲಿ ನಾವೆಲ್ಲ ಶೂದ್ರರು, ನಾವೆಲ್ಲ ಕಟ್ಟಕಡೆಯ ವರ್ಣಕ್ಕೆ ಸೇರಿದವರು. ನಾವೆಲ್ಲ ಸಂಪತ್ತು, ವಿದ್ಯೆ ಅನುಭವಿಸುವ ಅಧಿಕಾರ ಇಲ್ಲ‌ ಎಂದು ಧರ್ಮಗ್ರಂಥಗಳು ಹೇಳಿವೆ. ನಾವೆಲ್ಲ ಬಹುಸಂಖ್ಯಾತರು ಆಗಿದ್ರು ಕೂಡ ಅವಕಾಶ ವಂಚಿತರಾಗುತ್ತ ಬಂದಿದ್ದೇವೆ. ಅದನ್ನು ಬದಲಾಯಿಸಬೇಕಾದ್ರೇ ನಾವು ಸಂಘಟಿತರಾಗಬೇಕು, ಹೋರಾಟ ಮಾಡ್ಬೇಕು, ಕೆಲವರು ಹೋರಾಟ ಮಾಡಿ ವ್ಯವಸ್ಥೆ ಬದಲಾವಣೆಯಲ್ಲಿ ಸಫಲರಾದ್ರು, ಕೆಲವರು ವಿಫಲರಾದ್ರು ಎಂದರು.

ಅಂಬೇಡ್ಕರ್ ಅವರು ಸಂವಿಧಾನವನ್ನು ತಂದು ಸಮಸಮಾಜ ನಿರ್ಮಾಣ ಮಾಡಿದರು. ಸಂವಿಧಾನ ನಮಗೆ ಮೂಲ‌ಗ್ರಂಥವಾಗ್ಬೇಕು. ಅದರಿಂದ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿದೆ. ಸಂವಿಧಾನದ ಬಗ್ಗೆ ಗೌರವ ಇಟ್ಟುಕೊಳ್ಳಬೇಕು, ಅದನ್ನು ರಕ್ಷಿಸುವ ಕೆಲಸವನ್ನು ಮಾಡ್ಬೇಕು, ಯಾವುದೇ ಒಂದು ದೇಶ ಜಾತ್ಯತೀತ ತತ್ವವನ್ನು ಬಿಟ್ಟು ಧರ್ಮದ ಹಿಂದೆ ಹೋದರೇ ಅಂತಹ ದೇಶ ಅಭಿವೃದ್ಧಿ ಆಗಲು ಸಾಧ್ಯವಿಲ್ಲ.

ನಮ್ಮ‌ ಭಾರತ ದೇಶ ಹಿಂದೂ ರಾಷ್ಟ್ರ ಆಗ್ಬಿಟ್ರೇ ಅತಂಹ ದೊಡ್ಡ ಅಪಾಯ ಮತ್ತೊಂದಿಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ. ಅಫ್ಘಾನಿಸ್ತಾನ, ಪಾಕಿಸ್ತಾನ ಮುಂತಾದ ದೇಶಗಳು ಇದಕ್ಕೆ ಉದಾಹರಣೆಯಾಗಿವೆ. ಧರ್ಮದ ಆಧಾರದ‌ ಮೇಲೆ‌ ರಾಷ್ಟ್ರ ಮಾಡಿದ್ದರಿಂದ ಈ ದೇಶಗಳು ವಿನಾಶದ ಸ್ಥಿತಿಗೆ ತಲುಪಿವೆ. ಒಂದು‌ ದೇಶ ಜಾತ್ಯತೀತ ತತ್ವ ಬಿಟ್ಟು ಧರ್ಮದ ಆಧಾರದ ಮೇಲೆ ಹೋದ್ರೇ ಅದಕ್ಕೆ ಉಳಿಗಾಲವಿಲ್ಲ ಎಂದು ಯತೀಂದ್ರ ಹೇಳಿದ್ರು.

ಬಿಜೆಪಿ ಹಾಗೂ ಆರ್​ಎಸ್​ಎಸ್​ನಿಂದ ಅಪಾಯ:ಬಿಜೆಪಿ ಹಾಗೂ ಆರ್​ಎಸ್​ಎಸ್ ​ನಿಂದ ಜಾತ್ಯತೀತ ತತ್ವಗಳಿಗೆ ಅಪಾಯ ಎದುರಾಗಿದೆ. ಇವರು ದೇಶವನ್ನು ಹಿಂದೂ ರಾಷ್ಟ್ರ ಮಾಡಬೇಕೆಂದು ಹೋಗುತ್ತಿದ್ದಾರೆ. ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು, ಅವಕಾಶ ಮಾಡಿಕೊಟ್ಟರೇ ನಮ್ಮ‌ ದೇಶಕ್ಕೂ ಪಾಕಿಸ್ತಾನ, ಅಫ್ಘಾನಿಸ್ತಾನದ ಪರಿಸ್ಥಿತಿ ಎದುರಾಗಲಿದೆ. ಅದಕ್ಕೆ‌ ನಾವು ಎಚ್ಚೆತ್ತುಕೊಳ್ಳಬೇಕು, ಯಾವ ಪಕ್ಷ ಧರ್ಮಾಧಾರಿತವಾಗಿ ರಾಜಕೀಯ ಮಾಡಿದರೇ ಅವರಿಂದ ಹುಷಾರ್ ಆಗಿರಬೇಕು. ಜನ ಧರ್ಮದ ಬಗ್ಗೆ ಹೇಳಿದರೇ ಸಮಾಜದ ಸಮಸ್ಯೆಗಳನ್ನು ಮರೆತು ಧರ್ಮದ ಹಿಂದೆ‌ ಹೋಗುವ ಪರಿಸ್ಥಿತಿ ಇದೆ.

ಇನ್ನು ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಕೂಡ ನಾವು ಅಹಿಂದ ಸಮುದಾಯದವರು ಮೇಲೆಳಲು ಆಗ್ತಿಲ್ಲ, ಅಹಿಂದ ವರ್ಗದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದು ತೀರಾ ಕಡಿಮೆ, ಇನ್ನು ಮೇಲ್ವರ್ಗದ ಸಮಾಜದವರೇ ಎಲ್ಲಾ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ:ನಾನು ದ್ವೇಷ ರಾಜಕಾರಣ ಮಾಡಲ್ಲ, ಅಪರಾಧ ಮಾಡಿದ್ರೆ ಕ್ರಮ ತೆಗೆದುಕೊಳ್ಳುತ್ತೇವೆ: ಸಿಎಂ ಸಿದ್ದರಾಮಯ್ಯ

Last Updated : Jan 3, 2024, 8:03 PM IST

ABOUT THE AUTHOR

...view details