ದಾವಣಗೆರೆ:ರಾಜ್ಯದಲ್ಲಿ ಒಟ್ಟು ಇನ್ನೂರು ಶಿಲಾಶಾಸನಗಳಿದ್ದವು. ನಾಗರಿಕರಣದಿಂದ ಅದರ ಸಂಖ್ಯೆ ಕೇವಲ ಮೂವತ್ತಕ್ಕೆ ಬಂದು ನಿಂತಿದೆ. ಶಿಲಾಶಾಸನಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದು ಮೈಸೂರು ಸಂಸ್ಥಾನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜನರಿಗೆ ಕರೆ ನೀಡಿದರು.
ದಾವಣಗೆರೆ ತಾಲೂಕಿನ ಕೋಲ್ಕುಂಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಳೇ ಶಿಲಾಶಾಸನ ಮರು ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೋಲ್ಕುಂಟೆ ಗ್ರಾಮದಲ್ಲಿ ದೊರೆತಿದ್ದ ಶಿಲಾಶಾಸನವನ್ನು ಇಲ್ಲಿನ ಗ್ರಾಮಸ್ಥರು ಉಳಿಸುವ ಕೆಲಸ ಮಾಡಿ ಅದನ್ನು ಮರು ಅನಾವರಣ ಮಾಡಿರುವುದು ಶ್ಲಾಘನೀಯ ಕೆಲಸ ಎಂದರು.
ಪ್ರಕೃತಿ ಸಂರಕ್ಷಣೆ ಮಾಡುವ ಮಾತುಗಳನ್ನಾಡಿದ ಅವರು, ಮುಂದಿನ ಪೀಳಿಗೆಗೆ ನಾವು ಸಂಸ್ಕೃತಿ ಪರಂಪರೆಯನ್ನು ಬೆಳೆಸಬೇಕಾಗಿದೆ. ದೇವಾಲಯಗಳು ಮುಂದಿನ ಪೀಳಿಗೆಗೆ ಮಾದರಿಯಾಗಬೇಕಾಗಿದೆ. ಮೊದಲು ಬುಟ್ಟಿಯಲ್ಲಿ ಕಾಯಿ ಹಣ್ಣು ತೆಗೆದುಕೊಂಡು ಹೋಗುತ್ತಿದ್ದೆವು. ಆದರೆ, ಇದೀಗ ಪ್ಲಾಸ್ಟಿಕ್ ಬಳಕೆ ಮಾಡಿ ಅಲ್ಲೇ ಬಿಸಾಕಿ ಹೋಗುತ್ತಿದ್ದಾರೆ ಎಂದು ಹೇಳಿದರು.