ದಾವಣಗೆರೆ: ಕೊರೊನಾ ನಿರ್ಮೂಲನೆಗಾಗಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ದೇವರ ಮೊರೆ ಹೋಗಿದ್ದಾರೆ. ಹೊನ್ನಾಳಿ-ನ್ಯಾಮತಿ ತಾಲೂಕುಗಳಲ್ಲಿ ಸೋಂಕು ಹೋಗಲಾಡಿಸಲು ಶಾಸಕರು ಹೋಮ ಮಾಡಿಸಿದ್ದು, ಗುಣಮುಖರಾದವರಿಗೆ ಹೋಳಿಗೆ ಊಟ ಉಣಬಡಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿರುವ ಕಾರಣ ಇನ್ನೊಂದು ವಾರ ಲಾಕ್ಡೌನ್ ಮುಂದುವರೆಸಲಾಗಿದೆ. ಆದ್ರೆ, ಶಾಸಕ ಎಂ.ಪಿ.ರೇಣುಕಚಾರ್ಯ, ದೇವರ ಮೊರೆ ಹೋಗಿದ್ದು, ಧನ್ವಂತರಿ ಹಾಗೂ ಮೃತ್ಯುಂಜಯ ಹೋಮಗಳನ್ನು ಮಾಡಿಸಿದ್ದಾರೆ. ಈ ಪೂಜಾ ಕೈಂಕರ್ಯದಲ್ಲಿ ಕೋವಿಡ್ನಿಂದ ಗುಣಮುಖರಾಗಿರುವ 50ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.