ಕರ್ನಾಟಕ

karnataka

ETV Bharat / state

ಕೊರೊನಾ ಹರಡದಿರಲು, ನಿಮ್ಮ ಜೀವ ಉಳಿಸಿಕೊಳ್ಳಲು ಮಾಸ್ಕ್ ಧರಿಸಿ.. ಜಿಲ್ಲಾಧಿಕಾರಿ ಬೀಳಗಿ

ಜಾತ್ರೆ, ಹಬ್ಬ ಹರಿದಿನಗಳಿಗೆ ಬೀಗರನ್ನು ಕರೆಸಿ ಊಟ ಉಪಚಾರ ಮಾಡುವುದರ ಜೊತೆಗೆ ಜಿಲ್ಲೆಯಲ್ಲಿನ ಪ್ರವಾಸಿ ಕೇಂದ್ರಗಳಿಗೆ ಅವರೊಂದಿಗೂ ಸಹ ಭೇಟಿ ನೀಡಿ..

Harihara
Harihara

By

Published : Sep 27, 2020, 7:04 PM IST

ಹರಿಹರ :ಪೊಲೀಸರು ಮಾಸ್ಕ್ ಇಲ್ಲದವರಿಗೆ ದಂಡ ಹಾಕುತ್ತಾರೆ ಎಂಬ ಭಯಕ್ಕೆ ಒಳಗಾಗದೆ ನಿಮ್ಮ ಜೀವ ಉಳಿಸಿಕೊಳ್ಳಲು, ಕೊರೊನಾ ದೂರವಿಡಲು ಮಾಸ್ಕ್ ಧರಿಸಿಕೊಳ್ಳಿ. ತಪ್ಪಿದ್ರೆ ಕೊರೊನಾವನ್ನು ನೀವೇ ಅಂಟಿಸಿಕೊಳ್ಳುವಿರಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದರು.

ನಗರದ ಹರಿಹರೇಶ್ವರ ದೇವಸ್ಥಾನದ ಬಳಿಯ ಬಿರ್ಲಾ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾತ್ರೆ, ಹಬ್ಬ ಹರಿದಿನಗಳಿಗೆ ಬೀಗರನ್ನು ಕರೆಸಿ ಊಟ ಉಪಚಾರ ಮಾಡುವುದರ ಜೊತೆಗೆ ಜಿಲ್ಲೆಯಲ್ಲಿನ ಪ್ರವಾಸಿ ಕೇಂದ್ರಗಳಿಗೆ ಅವರೊಂದಿಗೂ ಸಹ ಭೇಟಿ ನೀಡಿ ಎಂದು ಕರೆ ಕೊಟ್ಟರು.

ಬಳಿಕ ತಹಶೀಲ್ದಾರ್ ಕೆ ಬಿ ರಾಮಚಂದ್ರಪ್ಪ ಮಾತನಾಡಿ, ಸೆ. 27ರಂದು ದೇಶ-ವಿದೇಶಗಳಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಿಸಬೇಕೆಂದು 1979ರಲ್ಲಿ ತೀರ್ಮಾನಿಸಿ, 1997 ರಿಂದ ಪ್ರತಿವರ್ಷ ಆಚರಿಸುವಂತೆ ವಿಶ್ವ ವಾಣಿಜ್ಯ ಸಂಸ್ಥೆ ನಿರ್ಧರಿಸಿ ಪ್ರತಿವರ್ಷ ಭಾರತದಲ್ಲಿಯೂ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಿಸಲಾಗುತ್ತಿದೆ.

ತಾಲೂಕಿನಲ್ಲಿ ಪ್ರವಾಸೋದ್ಯಮ ಕೇಂದ್ರಗಳು ಬಹಳಷ್ಟಿವೆ. ಎಲ್ಲಾ ತಾಣಗಳ ಅಭಿವೃದ್ಧಿ ಪಡಿಸುವ ಅವಶ್ಯಕತೆ ಇದೆ. ಕೊರೊನಾ ಕಾರಣದಿಂದ ಕೆಲಸಗಳು ಕುಂಠಿತವಾಗಿವೆ ಎಂದು ಹೇಳಿದರು. ನಂತರ ಜಿಲ್ಲಾ ಪ್ರವಾಸೋದ್ಯಮ ಸಹಾಯಕ ನಿರ್ದೇಶಕ ಬಿ.ಪಾಲಾಕ್ಷಿ ಮಾತನಾಡಿ, ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಐತಿಹಾಸಿಕ ಸ್ಥಳಗಳಿವೆ ಎಂದು ಗುರುತಿಸಲಾಗಿದೆ.

ಆದರೆ, ವಾಸ್ತವವಾಗಿ 25ಕ್ಕೂ ಹೆಚ್ಚು ಸ್ಥಳಗಳಿವೆ. ತಾಂತ್ರಿಕ ಕಾರಣಗಳಿಂದ ಅವುಗಳನ್ನು ಸೇರ್ಪಡೆ ಮಾಡಿಕೊಂಡಿರುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ಪೌರಾಯುಕ್ತೆ ಎಸ್‌ ಲಕ್ಷ್ಮಿ, ಪಿಎಸ್‌ಐ ಎಸ್ ಶೈಲಶ್ರೀ, ಎಸ್ ಕೆ ನವೀನ್, ಸುಧೀರ್, ಎಂ. ಉಮ್ಮಣ್ಣ, ಕೆ ಜಿ ಸಿದ್ದೇಶ್, ರೇವಣಸಿದ್ದಪ್ಪ ಅಂಗಡಿ ಹಾಗೂ ಪುರಾತತ್ವ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ABOUT THE AUTHOR

...view details