ಕರ್ನಾಟಕ

karnataka

ETV Bharat / state

ಹರಿಹರ: ಕೊಂಡಜ್ಜಿಯಲ್ಲಿ ವಿಶ್ವ ಚಿತ್ತ ವಿಕಲತೆಯ ಅರಿವು ದಿನಾಚರಣೆ - World Mental Disorders Awareness Day

ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ವಿಶ್ವ ಚಿತ್ತ ವಿಕಲತೆಯ (ಸ್ಕಿಜೋಪ್ರಿನಿಯಾ) ಅರಿವು ದಿನಾಚರಣೆ ನಡೆಸಲಾಯಿತು.

World Mental Disorders Awareness Day
ವಿಶ್ವ ಚಿತ್ತ ವಿಕಲತೆಯ ಅರಿವು ದಿನಾಚರಣೆ.

By

Published : May 28, 2020, 8:20 PM IST

ಹರಿಹರ : ಮಾನಸಿಕ ಕ್ರಿಯೆಗಳಲ್ಲಿ ಏರುಪೇರು ಹಾಗೂ ಮಾತು ನಡತೆಯಲ್ಲಿ ವಿಚಿತ್ರವಾಗಿ ಕಾಣುವ ವ್ಯಕ್ತಿಯ ಚಿತ್ತ ಇವು ವಿಕಲತೆ ಹೊಂದಿರುವ ರೋಗಿಯ ಲಕ್ಷಣಗಳಾಗಿರುತ್ತವೆ ಎಂದು ಜಿಲ್ಲಾ ಮನೋಶಾಸ್ತ್ರಜ್ಞ ವಿಜಯಕುಮಾರ್ ಹೇಳಿದರು.

ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ನಡೆದ ವಿಶ್ವ ಚಿತ್ತ ವಿಕಲತೆಯ (ಸ್ಕಿಜೋಪ್ರಿನಿಯಾ) ಅರಿವು ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರೀರದ ಕಾಯಿಲೆಗಳಲ್ಲಿ ನಾನಾ ಬಗೆಯ ಮಾನಸಿಕ ಕಾಯಿಲೆಗಳಲ್ಲೂ ವಿವಿಧ ಬಗೆಗಳಿವೆ. ಚಿತ್ತ ಚಂಚಲತೆ, ಚಿತ್ತ ವಿಕಲತೆ, ಮದ್ದು- ಮದ್ಯ ವ್ಯಸನ, ಬುದ್ದಿ ಮಾಂದ್ಯತೆ, ಮನೋದೈಹಿಕ ಬೇನೆ, ವ್ಯಕ್ತಿ ದೋಷ, ಮೆದುಳಿನ ಅಂಗದೋಷದ ಹಾಗೂ ಮಕ್ಕಳಲ್ಲಿ ಕಂಡು ಬರುವ ನಡವಳಿಕೆ ದೋಷಗಳು ಮತ್ತು ಮತ್ತಿತರ ಮನಸ್ಸಿನ ಕಾಯಿಲೆಗಳು ಈ ವಿವಿಧ ರೀತಿಯ ಲಕ್ಷಣಗಳಾಗಿವೆ ಎಂದರು.

ಕೊಂಡಜ್ಜಿಯಲ್ಲಿ ವಿಶ್ವ ಚಿತ್ತ ವಿಕಲತೆಯ ಅರಿವು ದಿನಾಚರಣೆ

ಮಾನಸಿಕ ಕಾಯಿಲೆಯನ್ನು ಹಲವು ರೀತಿಯಲ್ಲಿ ತಡೆಗಟ್ಟಲು ಸಾಧ್ಯವಿದೆ. ಆರೋಗ್ಯಕರ ಆಲೋಚನೆ, ಯೋಗ ಮತ್ತು ಧ್ಯಾನ, ವ್ಯಾಯಾಮ, ಗಾಳಿ ವಿಹಾರ, ಕುಟುಂಬ ಮತ್ತು ಸ್ನೇಹಿತರೊಡನೆ ಸಮಾಲೋಚನೆ, ಮಕ್ಕಳಿಗೆ ಬಾಲ್ಯದಲ್ಲಿಯೆ ಪ್ರೀತಿ-ವಿಶ್ವಾಸ-ಸಹಕಾರ, ಉತ್ತಮ ಆಹಾರ ಸೇವನೆ- ಆರೋಗ್ಯಕರ ವಾತವರಣ, ಮಾನಸಿಕ ಅಸ್ವಸ್ಥೆತೆಯನ್ನು ಪ್ರಾರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ನೀಡುವ ಮೂಲಕ ಈ ಕಾಯಿಲೆಯನ್ನು ಚಿಕಿತ್ಸೆ ಹಾಗೂ ಔಷಧೋಪಚಾರದಿಂದಲೂ ನಿಯಂತ್ರಿಸಬಹುದು ಎಂದರು.

ಇದೇ ವೇಳೆ, ಡಾ ಶಶಿಕಲಾ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಆರೋಗ್ಯ ಹಿರಿಯ ಸಹಾಯಕ ಎಂ.ಉಮ್ಮಣ್ಣ, ಕಿರಿಯ ಆರೋಗ್ಯ ಸಹಾಯಕ ಡಿ.ಎಸ್.ದೇವೆಂದ್ರಪ್ಪ, ಜಯರಾಂ, ಗೀರಿಶ್ ನಾಯ್ಕ್, ಸಂತೋಷ್ ಕುಮಾರ್ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ABOUT THE AUTHOR

...view details