ಕರ್ನಾಟಕ

karnataka

ETV Bharat / state

ರಕ್ತ ಕುದಿತೈತಿ ಲೋ ಅಂತಾ ಚಪ್ಪಲಿಯಲ್ಲಿ ಯದ್ವಾತದ್ವಾ ಥಳಿಸಿದಳು.. ಏಟು ತಿಂದವ ಗಪ್‌ಚುಪ್‌.. - honnali

ಈ ಘಟನೆಗೆ ಏನ್ ಕಾರಣ ಅನ್ನೋದು ಅಸ್ಪಷ್ಟವಾಗಿತ್ತು. ಆದರೆ, ಯುವತಿ ಮಾತ್ರ ಸಾಕಷ್ಟು ನೊಂದಂತೆ ಕಾಣ್ತಾಯಿತ್ತು. ಅದಕ್ಕೆಲ್ಲಾ ಎದುರಿಗೆ ಏಟು ತಿನ್ನುತ್ತಿದ್ದ ವ್ಯಕ್ತಿಯೇ ಕಾರಣ ಅಂತಾ ವಿಡಿಯೋದಲ್ಲಿ ಕಾಣ್ತಾಯಿತ್ತು. ಜನ ಮಾತ್ರ ಇಷ್ಟೊಂದು ಹೈಡ್ರಾಮಾ ನಡೆದರೂ ಯಾರೊಬ್ಬರೂ ತುಟಿಬಿಚ್ಚಲೇ ಇಲ್ಲ.

ರೋಡಲ್ಲೇ ವ್ಯಕ್ತಿಗೆ ಚಪ್ಪಲಿ ಸೇವೆ

By

Published : Jul 16, 2019, 5:44 PM IST

ದಾವಣಗೆರೆ: ನಿನ್ನಂತೆ ಅನ್ನ ಹಾಕಿದವರ ಮನೆಗೆ ನಾ ಕನ್ನ ಹಾಕಿಲ್ಲ.. ಎಷ್ಟು ಮಂದಿ ಹುಡುಗಿಯರ ಬಾಳು ಹಾಳು ಮಾಡಬೇಕು ಅಂದ್ಕೊಂಡಿರುವೆ.. ನನ್ನ ತಂಗಿಯ ಜೀವನವನ್ನೇ ಮೂರಾಬಟ್ಟೆ ಮಾಡಿದೆ. ಆದರೂ ಹೋಗಲಿ ಅಂತಾ ಬಿಟ್ಟೇ.. ಆದರೆ, ನನ್ನ ಅಣ್ಣನ ಕೊಂದರೆ ಬಿಡ್ತೀನಾ ನಿನಗೇ.. ನಮ್ಮಣ್ಣ ಏನ್‌ ಮಾಡಿದ್ದಾ ನಿನಗಾ.. ಹೇಳಲೋ ನಮ್ಮಣ್ಣ ನಿನಗೇನ್‌ ಮಾಡಿದ್ದಾ.. ಹೇಳೋ ನಿನಗೇನ್‌ ಬೇಕಾಗಿತ್ತು, ನಮ್ಮಣ್ಣನ ಯಾಕೋ ಕೊಂದ್ರೀ.. ಹರೆಯದವನು ನಮ್ಮಣ್ಣ ಸತ್ತಿರೋನು, ರಕ್ತ ರಕ್ತ ಕುದಿಯುತ್ತೆ ಅಂತಾ ಯುವತಿ ತನ್ನಲ್ಲಿರೋ ಅಷ್ಟೂ ಸಿಟ್ಟನ್ನೂ ಹೊರಗೆ ಹಾಕ್ತಾಯಿದ್ದಳು.

.

ಬಸ್‌ ನಿಲ್ದಾಣದಲ್ಲಿ ಎಲ್ಲರೆದುರಿಗೇ ಚಪ್ಪಲಿ ಸೇವೆ..

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಸ್‌ ನಿಲ್ದಾಣದಲ್ಲಿ ಥೇಟ್‌ ಸಿನಿಮಾ ರೀತಿಯ ಈ ಸೀನ್‌ ಜನರಿಗೆ ಮನರಂಜನೆಯಂತಾಗಿತ್ತು. ಎಷ್ಟೋ ಮಂದಿ ಕೈಯಲ್ಲಿದ್ದ ಮೊಬೈಲ್‌ನಲ್ಲಿ ಇದನ್ನೆಲ್ಲ ರೆಕಾರ್ಡ್‌ ಮಾಡಿಕೊಳ್ತಿದ್ದರು. ಕೈಯಲ್ಲಿ ಚಪ್ಪಲಿ ಹಿಡ್ಕೊಂಡು ಎದುರಿಗಿದ್ದ ಯುವಕನಿಗೆ ಮನಸೋ ಇಚ್ಛೆ ಥಳಿಸುತ್ತಿದ್ದಳು ಯುವತಿ. ಶರ್ಟ್‌ನ ಕೈಯಲ್ಲಿ ಹಿಡಿದು ಎಳೆದಳು, ದೂಡಿದಳು, ಗುದ್ದಿದಳು, ಶಾಪ ಹಾಕಿದಳು, ಬೈದಳು.. ಏನೇ ಮಾಡಿದರೂ ಆಕೆಯ ಕೋಪ ತಣ್ಣಗಾಗ್ತಾನೆ ಇರಲಿಲ್ಲ. ಯುವತಿ ಚಪ್ಪಲಿಯಲ್ಲಿ ಯದ್ವಾತದ್ವಾ ಹೊಡೀತಾಯಿದ್ರೇ ಎದುರಿಗೆ ಏಟು ತಿನ್ನುತ್ತಿದ್ದ ವ್ಯಕ್ತಿ ಮಾತ್ರ ಜಪ್ಪಯ್ಯಾ ಅಂದರೂ ಒಂದೇ ಒಂದು ಮಾತೂ ಆಡಲಿಲ್ಲ.

ಈ ಘಟನೆಗೆ ಏನ್ ಕಾರಣ ಅನ್ನೋದು ಅಸ್ಪಷ್ಟವಾಗಿತ್ತು. ಆದರೆ, ಯುವತಿ ಮಾತ್ರ ಸಾಕಷ್ಟು ನೊಂದಂತೆ ಕಾಣ್ತಾಯಿತ್ತು. ಅದಕ್ಕೆಲ್ಲಾ ಎದುರಿಗೆ ಏಟು ತಿನ್ನುತ್ತಿದ್ದ ವ್ಯಕ್ತಿಯೇ ಕಾರಣ ಅಂತಾ ವಿಡಿಯೋದಲ್ಲಿ ಕಾಣ್ತಾಯಿತ್ತು. ಜನ ಮಾತ್ರ ಇಷ್ಟೊಂದು ಹೈಡ್ರಾಮಾ ನಡೆದರೂ ಯಾರೊಬ್ಬರೂ ತುಟಿಬಿಚ್ಚಲೇ ಇಲ್ಲ.

ಏಟು ಕೊಡುತ್ತಿದ್ದ ಯುವತಿಗೂ ಏಟು ತಿನ್ನುತ್ತಿದ್ದ ವ್ಯಕ್ತಿಗೂ ಮೊದಲೇ ಪರಿಚಯವಿತ್ತು ಅಂತಾ ವಿಡಿಯೋದಲ್ಲಿ ಗೊತ್ತಾಗುತ್ತೆ.ನನ್ನ ತಂಗಿ ಜೀವನ ಹಾಳು ಮಾಡಿದೆ. ನನ್ನ ಅಣ್ಣನ ಕೊಲೆ ಮಾಡಿದೆ. ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದೆ. ನಮ್ಮ ಮನೆಯಲ್ಲಿ ಊಟ ಮಾಡಿ ನಮಗೆ ಮೋಸ ಮಾಡಿದೆ. ನನ್ನ ರಕ್ತ ಕುದಿಯುತ್ತಿದೆ. ನಿನಗೆ ಈಗ ತಕ್ಕ ಶಾಸ್ತಿ ಆಗಿದೆ ಅಂತಾ ಯುವತಿ ಹೇಳುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗಿದೆ. ಯುವತಿ ಹೊನ್ನಾಳಿ ತಾಲೂಕಿನ ತಿಮ್ಮನಕಟ್ಟೆ ಗ್ರಾಮದ ನಿವಾಸಿ ಎಂದು ಹೇಳಲಾಗ್ತಿದೆ. ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ಯಾವುದೇ ಪ್ರಕರಣವೂ ದಾಖಲಾಗಿಲ್ಲ.

ABOUT THE AUTHOR

...view details