ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಚಿಕ್ಕಬಾಸೂರ ಗ್ರಾಪಂ ವ್ಯಾಪ್ತಿಯಲ್ಲಿ ಮಹಿಳೆಯರಿಬ್ಬರಿಗೆ ಸಮವಾಗಿ ಮತ ಬಂದ ಪರಿಣಾಮ ಲಾಟರಿ ಹಾಕುವ ಮೂಲಕ ಓರ್ವ ಮಹಿಳೆ ಗೆಲುವು ಸಾಧಿಸಿದ್ದಾಳೆ.
ಚಿಕ್ಕಬಾಸೂರು ಗ್ರಾಪಂನಿಂದ ಇಬ್ಬರು ಮಹಿಳೆಯರು ಸ್ಪರ್ಧಿಸಿದ್ದು, ಇಬ್ಬರಿಗೂ ತಲಾ 119 ಮತ ಬಂದಿರುವುದು ಚುನಾವಣಾ ಅಧಿಕಾರಿಗಳಿಗೆ ತಲೆಬಿಸಿಯಾಗಿ ಪರಿಣಮಿಸಿತ್ತು. ಬಳಿಕ ಲಾಟರಿ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಯಿತು.