ದಾವಣಗೆರೆ:ಮೂರು ತಿಂಗಳ ಗರ್ಭಿಣಿ ನೇಣಿಗೆ ಶರಣಾಗಿರುವ ಘಟನೆ ನಗರದ ಹೊರವಲಯದ ಆಂಜನೇಯ ಮಿಲ್ ಬಡಾವಣೆಯಲ್ಲಿ ನಡೆದಿದ್ದು, ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬಂದಿದೆ.
ರೇಣುಕಾ (24) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪ್ರಕಾಶ ಎಂಬವರನ್ನು ಪ್ರೀತಿಸಿ ಮದುವೆ ಆಗಿದ್ದ ರೇಣುಕಾ, ಪತಿಯ ಮನೆಯವರ ಹಿಂಸೆ ತಾಳಲಾರದೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಮೃತ ರೇಣುಕಾ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿ ಕಲ್ಲದೇವರು ಗ್ರಾಮದ ನಿವಾಸಿ. ಘಟನೆ ಬಳಿಕ ಆರೋಪಿ ಗಂಡ ಪ್ರಕಾಶನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮದುವೆಯಾದ 10 ತಿಂಗಳಲ್ಲೇ ನವವಿವಾಹಿತೆ ಶವವಾಗಿ ಪತ್ತೆ: ಪತಿ-ಅತ್ತೆಯ ಮೇಲೆ ಗುಮಾನಿ