ಕರ್ನಾಟಕ

karnataka

ETV Bharat / state

ದಾವಣಗೆರೆ: ವಿಷಕಾರಿ ಹುಳು ಕಡಿದು ವಿಂಡ್ ಪ್ಯಾನ್ ಕಂಪನಿ ಸಿಬ್ಬಂದಿ ಸಾವು

ಈ ಪ್ರದೇಶದಲ್ಲಿ ವಿಷಕಾರಿ ಜೇನು ಹುಳುವಿನಿಂದ ಸಾವನ್ನಪ್ಪಿರುವ ಘಟನೆ ಇದು ಎರಡನೇಯದು. ಅರಣ್ಯ ಇಲಾಖೆಯ ಮೇಲೆ ಆಕ್ರೋಶಗೊಂಡಿರುವ ಸ್ಥಳೀಯರು ಹುಳುಗಳನ್ನು ಓಡಿಸಿ ಗೂಡು ನಾಶ ಮಾಡುವಂತೆ ಆಗ್ರಹಿಸಿದ್ದಾರೆ.

By

Published : Nov 10, 2022, 9:52 AM IST

Poisonous bee species worm nest
ವಿಷಕಾರಿ ಜೇನು ಜಾತಿಯ ರಾಮ ಹುಳು ಗೂಡು

ದಾವಣಗೆರೆ: ವಿಷಕಾರಿ ಜೇನು ಜಾತಿಯ ಹುಳು ಕಡಿದು ವಿಂಡ್ ಪ್ಯಾನ್ ಕಂಪನಿಯ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಿ.ಪಿ.ಶಿವಕುಮಾರ್ ಅಲಿಯಾಸ್ ಬಾಬಣ್ಣ (49) ಮೃತ ದುರ್ದೈವಿ. ಶಿವಕುಮಾರ್ ಅವರು ವೆಸ್ಟಾಸ್ ಆರ್​ಆರ್​ಬಿ ವಿಂಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ವಿಂಡ್ ಫ್ಯಾನ್ ಪ್ಲಾಂಟ್‌ ಬಳಿ ಕಾರ್ಯನಿರ್ವಹಿಸುವಾಗ ಘಟನೆ ನಡೆದಿದೆ.

ಇದು ವಿಚಿತ್ರವಾಗಿ ಗೂಡು ಕಟ್ಟುವ ಹುಳು. ಈ ರೀತಿಯ ಸಾವು ಇದು ಎರಡನೇಯ ಬಾರಿಗೆ ನಡೆದಿದ್ದು ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಳುಗಳನ್ನು ಓಡಿಸಿ ಗೂಡುಗಳನ್ನು ನಾಶ ಮಾಡುವಂತೆ ಆಗ್ರಹಿಸಿದ್ದಾರೆ. ಬಸವ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ ಜರುಗಿದೆ.

ಇದನ್ನೂ ಓದಿ:ತುಮಕೂರಿನಲ್ಲಿ ಹೆಜ್ಜೇನು ದಾಳಿ: ಓರ್ವ ಸಾವು, ಮೂವರ ಸ್ಥಿತಿ ಗಂಭೀರ

ABOUT THE AUTHOR

...view details