ಕರ್ನಾಟಕ

karnataka

By

Published : Dec 28, 2022, 10:08 PM IST

ETV Bharat / state

ಫಾರ್ಮ್ ಹೌಸ್​ನಲ್ಲಿ ವನ್ಯಜೀವಿಗಳು ಪತ್ತೆ: ನಿರೀಕ್ಷಣಾ ಜಾಮೀನಿಗಾಗಿ ಆರೋಪಿಗಳಿಂದ ಅರ್ಜಿ

ಡಿಸೆಂಬರ್‌ 21ರಂದು ಬೆಂಗಳೂರು ಸಿಸಿಬಿ ಅಧಿಕಾರಿಗಳು ದಾವಣಗೆರೆ ನಗರದ ಆನೆಕೊಂಡ ಬಳಿ ಇರುವ ಮಿಲ್ ಮೇಲೆ ದಾಳಿ ನಡೆಸಿ, ವನ್ಯಜೀವಿಗಳನ್ನು ವಶಕ್ಕೆ ಪಡೆದು ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು.

case of finding wildlife in a farm house
ಫಾರ್ಮ್ ಹೌಸ್​ನಲ್ಲಿ ವನ್ಯಜೀವಿಗಳು ಪತ್ತೆ ಪ್ರಕರಣ:ನಿರೀಕ್ಷಣಾ ಜಾಮೀನಿಗೆ ಆರೋಪಿಗಳು ಅರ್ಜಿ

ದಾವಣಗೆರೆ:ಮಾಜಿ ಸಚಿವರೊಬ್ಬರ ಒಡೆತನದ ಮಿಲ್‌ನಲ್ಲಿ ವನ್ಯಜೀವಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಆರೋಪಿಗಳು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮ್ಯಾನೇಜರ್ ಸಂಪಣ್ಣ ಮುತಾಲಿಕ್ ಹಾಗೂ ಮಿಲ್​ನಲ್ಲಿ ಕೆಲಸ ಮಾಡುವ ಕರಿಬಸಯ್ಯ ಎಂಬ ಆರೋಪಿಗಳು ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನಿಗಾಗಿ ಅರ್ಜಿ ಹಾಕಿದ್ದಾರೆ. ಆರೋಪಿಗಳಿಗೆ ನೋಟಿಸ್ ಜಾರಿ‌ ಮಾಡುವಂತೆ ಸರ್ಕಾರಿ ಅಭಿಯೋಜಕರಿಗೆ ಸೂಚಿಸಿ ಪ್ರಕರಣದ ವಿಚಾರಣೆಯನ್ನು ಇದೇ ತಿಂಗಳು 31ಕ್ಕೆ ನ್ಯಾಯಾಲಯ ಮುಂದೂಡಿದೆ.

ಪ್ರಾಣಿ ಸಂಗ್ರಹಾಲಯಕ್ಕೆ ಪ್ರಾಣಿಗಳು ಸ್ಥಳಾಂತರ:ಮಿಲ್ ಹಿಂಭಾಗದ ಫಾರ್ಮ್ ಹೌಸ್‌ನಲ್ಲಿ ಪತ್ತೆಯಾದ ಕೃಷ್ಣಮೃಗ, ಜಿಂಕೆ ಸೇರಿ ಒಟ್ಟು 30 ವನ್ಯಜೀವಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಎರಡು ನರಿ, ಮೂರು ಮುಂಗುಸಿ ಹಾಗೂ 7 ಕಾಡು ಹಂದಿಗಳು, 11 ಕೃಷ್ಣಮೃಗಗಳು ಹಾಗೂ ಏಳು ಜಿಂಕೆಗಳನ್ನು ಆನಗೋಡು ಕಿರು ಪ್ರಾಣಿ ಸಂಗ್ರಹಾಲಯಕ್ಕೆ ವನ್ಯಜೀವಿಗಳನ್ನು ಸ್ಥಳಾಂತರಿಸಲಾಗಿದೆ.

ನ್ಯಾಯಾಲಯದ ಆದೇಶದಂತೆ ವೈದ್ಯರಿಂದ ಪರೀಕ್ಷೆ ಮಾಡಲಾಗಿದೆ. ಇದೇ ವೇಳೆ ಆರೋಪಿಗಳಾದ ಮ್ಯಾನೇಜರ್ ಸಂಪಣ್ಣ ಮುತಾಲಿಕ್, ಕರಿಬಸಯ್ಯ ಹಾಗು ಸೇಂಥಿಲ್ ಎಂಬಾತನ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ:ವಾರೆಂಟ್ ಜಾರಿಗೆ ಲಂಚಕ್ಕೆ ಬೇಡಿಕೆ: ಬಸ್ಟ್ಯಾಂಡ್​ನಲ್ಲೇ ರೆಡ್​ಹ್ಯಾಂಡಾಗಿ ಕಾನ್​ಸ್ಟೇಬಲ್ ಲೋಕಾಯುಕ್ತ ಬಲೆಗೆ

ABOUT THE AUTHOR

...view details