ಕರ್ನಾಟಕ

karnataka

ETV Bharat / state

ಅಕ್ರಮ ಸಂಬಂಧ: ಕಟ್ಟಿಗೆಯಿಂದ ಹೊಡೆದು ಪತಿ ಕೊಂದ ಪತ್ನಿ - undefined

ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದ ಪತಿಯನ್ನು ಪತ್ನಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಬಾತಿ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿ ಶ್ರೀನಿವಾಸ್​

By

Published : Apr 18, 2019, 6:16 PM IST

ದಾವಣಗೆರೆ:ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದ ಪತಿಯನ್ನು ಪತ್ನಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಬಾತಿ ಗ್ರಾಮದಲ್ಲಿ ನಡೆದಿದೆ.

ಶ್ರೀನಿವಾಸ್ (35) ಕೊಲೆಯಾದ ವ್ಯಕ್ತಿ. ಜಹೀದಾ ಬಾನು ಹತ್ಯೆ ಮಾಡಿದ ಹೆಂಡತಿ. ಈತ ಬಾತಿ ಗ್ರಾಮದ ಎಂದು ಗುರುತಿಸಲಾಗಿದೆ.

ಕೊಲೆಯಾದ ವ್ಯಕ್ತಿ ಶ್ರೀನಿವಾಸ್​

ಕೊಲೆಗೆ ಕಾರಣವೇನು...?
ಕಳೆದ 20 ವರ್ಷಗಳ ಹಿಂದೆ ಜಹೀದಾ ಬಾನು ವಿವಾಹವಾಗಿತ್ತು. 3 ವರ್ಷಗಳ ಬಳಿಕ ತನ್ನ ಗಂಡನಿಂದ ವಿಚ್ಚೇದನ ಪಡೆದಿದ್ದರು. ಜಹೀದಾ ಬಾನುಗೆ ಒಬ್ಬಳು ಮಗಳು ಇದ್ದಾಳೆ. ಈ ವೇಳೆ ಶ್ರೀನಿವಾಸನಿಗೆ ಜಹೀದಾಳ ಪರಿಚಯವಾಗಿತ್ತು. ಈ ಪರಿಚಯ ಪ್ರೇಮಕ್ಕೆ ತಿರುಗಿ ಬಳಿಕ ಇಬ್ಬರು ಮದುವೆ ಆಗಿದ್ದರು. ಇಬ್ಬರು ಬಾತಿ ಗ್ರಾಮದಲ್ಲಿ ವಾಸವಿದ್ದರು.

ಆದರೆ ಕಳೆದ 6 ವರ್ಷಗಳ ಹಿಂದೆ ಬೆಂಗಳೂರಿಗೆ ಹೋಗಿದ್ದ ಈತ ಅಲ್ಲಿ ಬೇರೊಬ್ಬಳ ಜೊತೆ ವಿವಾಹವಾಗಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ್​ ಮತ್ತು ಜಹೀದಾಳ ಮಧ್ಯೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಬೆಂಗಳೂರಿನಿಂದ ಬಾತಿ ಗ್ರಾಮಕ್ಕೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಿದ್ದನು ಎಂದು ಹೇಳಲಾಗುತ್ತಿದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಾತಿ ಗ್ರಾಮಕ್ಕೆ ಶ್ರೀನಿವಾಸ್​ ಬಂದಿದ್ದನು. ಈತನ ಜೊತೆ ಜಹೀದಾ ತಗಾದೆ ತೆಗೆದಿದ್ದಾಳೆ. ಇನ್ನೊಬ್ಬಳನ್ನು ಮದುವೆಯಾಗಿ ನನಗೆ ಯಾಕೆ ಮೋಸ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾಳೆ. ಈ ವಿಷಯಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದೆ. ಆಗ ಸಿಟ್ಟಿಗೆದ್ದ ಜಹೀದಾ ಕಟ್ಟಿಗೆಯಿಂದ ಹೊಡೆದು ಶ್ರೀನಿವಾಸ್​ನನ್ನು ಕೊಂದು ಹಾಕಿದ್ದಾಳೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಗ್ರಾಮಾಂತರ ಪೊಲೀಸರು ಆರೋಪಿ ಜಹೀದಾಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details