ದಾವಣಗೆರೆ:ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಪ್ರಕರಣ ಜಿಲ್ಲೆಯ ಚನ್ನಗಿರಿ ತಾಲೂಕಿನ ವಡ್ನಾಳ್ ಬನ್ನಿಹಟ್ಟಿ ಗ್ರಾಮದಲ್ಲಿ ವರದಿಯಾಗಿದೆ. ಗಂಡನನ್ನೇ ಕೊಂದು ತನಗೆ ಏನೂ ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿದ್ದ ಕೊಲೆಗಾತಿ ಪತ್ನಿ ಹಾಗು ಪ್ರಿಯಕರ ಇಬ್ಬರೂ ಇದೀಗ ಕಂಬಿ ಎಣಿಸುತ್ತಿದ್ದಾರೆ.
ವಡ್ನಾಳ್ ಬನ್ನಿಹಟ್ಟಿ ಗ್ರಾಮದ ನಿವಾಸಿ ಲೋಕೇಶಪ್ಪ (38) ಕೊಲೆಯಾದವ. ಪತ್ನಿ ಕುಸುಮ (30), ಪ್ರಿಯಕರ ಪ್ರಭು ಲಿಂಗಪ್ಪ (35) ಬಂಧಿತ ಆರೋಪಿಗಳು. ಆರೋಪಿ ಪತ್ನಿಯ ಪ್ರಿಯಕರ ಪ್ರಭು ಲಿಂಗಪ್ಪ, ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ನಿವಾಸಿಯಾಗಿದ್ದು, ಕುಸುಮಳೊಂದಿಗೆ ಅಕ್ರಮಸಂಬಂಧ ಇಟ್ಟುಕೊಂಡಿದ್ದನಂತೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಲೋಕೇಶಪ್ಪನನ್ನು ಇಬ್ಬರು ಸೇರಿ ಕತ್ತು ಹಿಸುಕಿ ಕಳೆದ 27ರ ತಡರಾತ್ರಿ ಮನೆಯಲ್ಲೇ ಕೊಲೆ ಮಾಡಿದ್ದರು ಎಂದು ತಿಳಿದು ಬಂದಿದೆ.