ಕರ್ನಾಟಕ

karnataka

ETV Bharat / state

ನಮ್ಮ ಮನೆ ಯಾಕೆ ರಾಜಕೀಯ ಪವರ್ ಸೆಂಟರ್ ಆಗಬಾರದು?: ಶಾಮನೂರು ಶಿವಶಂಕರಪ್ಪ - ದಾವಣಗೆರೆಯಲ್ಲಿ ಮಾತನಾಡಿದ ಹಿರಿಯ ಶಾಸಕ​ ಶಾಮನೂರು ಶಿವಶಂಕರಪ್ಪ

ಜಗದೀಶ್ ಶೆಟ್ಟರ್, ಬೊಮ್ಮಯಿ, ಎಂ.ಬಿ.ಪಾಟೀಲ್ ನಾವೆಲ್ಲಾ ವೀರಶೈವ ಲಿಂಗಾಯತರು. ಅದಕ್ಕೆ ಸಂಬಂಧ ಬೆಳೆಸುತ್ತೇವೆ. ನಮ್ಮ ಮನೆ ರಾಜಕೀಯ ಪವರ್ ಸೆಂಟರ್ ಇದ್ದಂತೆ ಎಂದು ಕಾಂಗ್ರೆಸ್​ನ ಹಿರಿಯ ಶಾಸಕ​ ಶಾಮನೂರು ಶಿವಶಂಕರಪ್ಪ ಹೇಳಿದರು.

Shamanoor Shivashankarappa
ಶಾಮನೂರು ಶಿವಶಂಕರಪ್ಪ

By

Published : Jun 16, 2022, 7:15 PM IST

ದಾವಣಗೆರೆ:ಜಗದೀಶ್ ಶೆಟ್ಟರ್, ಬೊಮ್ಮಾಯಿ, ಎಂ.ಬಿ.ಪಾಟೀಲ್​​ ನಾವೆಲ್ಲಾ ವೀರಶೈವ ಲಿಂಗಾಯತರು. ಅದಕ್ಕೆ ಸಂಬಂಧ ಬೆಳೆಸುತ್ತೇವೆ. ನಮ್ಮ ಮನೆ ಯಾಕೆ ರಾಜಕೀಯ ಪವರ್ ಸೆಂಟರ್ ಆಗಬಾರದಾ?. ಮುಂದೆ ಏನ್ ಆಗುತ್ತೋ ಯಾರಿಗೆ ಗೊತ್ತು. ಭವಿಷ್ಯ ಹೇಳೋಕೆ ಆಗೋಲ್ಲ, ಬೇಕಿದ್ರೆ ಕೋಡಿಮಠದ ಸ್ವಾಮೀಜಿಯನ್ನು ಕೇಳಿ ಎಂದು ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು.


ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಿಎಂ ಆಗುವ ಎಲ್ಲಾ ಅರ್ಹತೆ ಇದೆ ಎಂಬ ರೀತಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಒಂದು ಮನೆಗೆ ಒಂದು ಟಿಕೆಟ್ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಆ ನಿಯಮ ನಮ್ಮ ಮನೆಗೆ ಅನ್ವಯವಾಗುವುದಿಲ್ಲ. ನಮ್ಮ ಮನೆಯಲ್ಲಿ ನಾಲ್ಕು ಜನರಿಗೆ ಟಿಕೆಟ್ ಕೊಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಅವರು ಕೂಡ ಸ್ಪರ್ಧಿಸುವುದಾಗಿ ತಿಳಿಸಿದರು.

ಇದನ್ನೂ ಓದಿ:ಬೆಂಗಳೂರು: ಕಾಂಗ್ರೆಸ್​ ಪ್ರತಿಭಟನೆ ವೇಳೆ ಕಾರ್ಯಕರ್ತನಿಗೆ ಹೃದಯಾಘಾತ

For All Latest Updates

TAGGED:

ABOUT THE AUTHOR

...view details