ದಾವಣಗೆರೆ: ’’ಕೋಡಿಹಳ್ಳಿ ಯಾವನು, ಅವನೊಬ್ಬ 420’’, ಅವನನ್ನು ಬಿಟ್ಟು ಮಾತುಕಥೆಗೆ ಬನ್ನಿ ಎಂದು ಕೆಎಸ್ಆರ್ಟಿಸಿ ನೌಕರರಿಗೆ ಹೇಳಿದ್ದೇನೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಶಾಸಕ ಎಂಪಿ ರೇಣುಕಾಚಾರ್ಯ ಕಿಡಿಕಾರಿದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಸಾರಿಗೆ ನೌಕರರ ಮನವಿ ಸ್ವೀಕರಿಸಿದ ಬಳಿಕ ದೂರವಾಣಿ ಮೂಲಕ ಸಾರಿಗೆ ಸಚಿವ ಲಕ್ಷ್ಮಣ ಸವದಿ ಜೊತೆ ಮೊಬೈಲ್ ನಲ್ಲಿ ಮಾತನಾಡುವಾಗ ಕೋಡಿಹಳ್ಳಿ ವಿರುದ್ಧ ಕಿಡಿಕಾರಿದರು.
ಕೆಎಸ್ಆರ್ಟಿಸಿ ನೌಕರರಿಂದ ಮನವಿ ಪಡೆದ ನಂತರ ಈ ಮಾತುಗಳು ಪೋನ್ ಸಂಭಾಷಣೆಯಲ್ಲಿ ಮಾತನಾಡಿದ ಅವರು, ಪ್ರಮುಖ ಬೇಡಿಕೆ ಈಡೇರಿಸಿದ್ದಾರೆ, ಎರಡು ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ, ಕೋಡಿಹಳ್ಳಿ ಕಾಂಗ್ರೆಸ್ ಏಜೆಂಟ್ ಇದ್ದ ಹಾಗೆ ಅವನನ್ನು ಬಿಟ್ಟು ಮಾತುಕತೆಗೆ ಬನ್ನಿ ಎಂದು ಹೇಳಿದ್ದೇನೆ. ಮುಷ್ಕರ ವಾಪಸ್ ಪಡೆಯಿರಿ, ಕೋವಿಡ್ ಬಂದು ಸಾಕಷ್ಟು ಅನ್ಯಾಯವಾಗಿದೆ ಆಗಿದೆ. ನಾನು ನಿಮ್ಮನ್ನು ಸಚಿವರ ಬಳಿ ಕರ್ಕೊಂಡು ಹೋಗ್ತೀನಿ ಈಗಿನಿಂದಲೇ ಬಸ್ ಸಂಚಾರ ಮಾಡಿ ನಾನು ಇರ್ತಿನಿ, ಸೆಂಟ್ರಲ್ ಕಮಿಟಿ ಇದೆ ಈ ಬಗ್ಗೆ ಮಾತುಕತೆಗೆ ನಾನು ಸಿಎಂ ಹಾಗೂ ಸಚಿವರ ಜೊತೆ ಮಾತುಕಥೆ ಮಾಡಿಸ್ತೀನಿ ಎಂದರು.
ದೂರವಾಣಿ ಮೂಲಕ ಸಾರಿಗೆ ಸಚಿವ ಲಕ್ಷ್ಮಣ ಸವದಿ ಜೊತೆ ಮಾತನಾಡಿದ ಶಾಸಕ ರೇಣುಕಾಚಾರ್ಯ ಕೋಡಿಹಳ್ಳಿ, ಕಾಂಗ್ರೆಸ್ ನವ್ರನ್ನಾ ಮೊದಲು ಬಿಟ್ಟು ಬನ್ನಿ ನಾನು ಸಿಎಂ ಕಾಲು ಹಿಡಿದು ಸಮಸ್ಯೆ ಬಗೆಹರಿಸುತ್ತೇನೆ. ನೀವು ಸೇವೆಗೆ ಹಾಜರಾಗಿ, ನಾನು ನಿಮ್ಮ ಪರವಾಗಿ ಬೀದಿಗೆ ಇಳಿಯುತ್ತೇನೆ. ಬೇಕಾದ್ರೆ ಸರ್ಕಾರದ ವಿರುದ್ದವಾಗಿ ಹೋರಾಟ ಮಾಡ್ತಿನಿ, ಲಕ್ಷಾಂತರ ಜನರು ಬೀದಿಗೆ ಬಿದ್ದಿದ್ದಾರೆ, ನೋವು ಅನುಭವಿಸುತ್ತಿದ್ದಾರೆ ಎಂದು ಸಾರಿಗೆ ನೌಕರರಿಗೆ ಎಂಪಿ ರೇಣುಕಾಚಾರ್ಯ ಮನವಿ ಮಾಡಿಕೊಂಡರು.