ದಾವಣಗೆರೆ:ಬಂಡಾಯಗಳನ್ನೆಲ್ಲ ಸರಿಪಡಿಸಿ ಉಪಚುನಾವಣೆಯಲ್ಲಿ ಕನಿಷ್ಠ 13 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ನಗರದ ಎಂಬಿಎ ಕಾಲೇಜಿನ ಮೈದಾನದಲ್ಲಿ ಮಾತನಾಡಿದ ಅವರು, ಹಿರೇಕೆರೂರು ಹಾಗೂ ರಾಣೆಬೆನ್ನೂರು ಕ್ಷೇತ್ರಗಳಿಗೆ ಇಂದು ಭೇಟಿ ನೀಡಿದ್ದೆ. ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಆ ಎರಡು ಕ್ಷೇತ್ರಗಳ ಜೊತೆಗೆ ಕನಿಷ್ಠ 13 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.
ಚುನಾವಣೆ ಬಂದಾಗ ಬಂಡಾಯ ಇದ್ದೇ ಇರುತ್ತದೆ. ಟಿಕೆಟ್ ಸಿಗದೇ ಇದ್ದೋರು ಬೇಜಾರು ಆಗುತ್ತಾರೆ. ಇವೆಲ್ಲವನ್ನುೂ ನಿಭಾಯಿಸಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಇಂದಿನವರೆಗೆ ಮಾಡಿರುವ ಕೆಲಸಗಳು ಹಾಗೂ ಮುಂದಿನ ಮೂರು ವರ್ಷ ಆಗಬೇಕಾದ ಕೆಲಸವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.
ಮಹಾರಾಷ್ಟ್ರದಲ್ಲಿ ಪಕ್ಷಾಂತರ ಮಾಡಿರುವರು ಸೋತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾರಾಯಣ ರಾಣೆ ಶಿವಸೇನೆ ಬಿಟ್ಟು ಕಾಂಗ್ರೆಸ್ಗೆ ಬೆಂಬಲಿಗರ ಸಮೇತ ಹೋಗಿದ್ದರು, ಅವರು ಎಲ್ಲರೂ ಗೆದ್ದಿದ್ದರು. ಆಯಾ ಕ್ಷೇತ್ರ, ಒಟ್ಟು ರಾಜಕೀಯ ಚುನಾವಣೆಯಲ್ಲಿ ಪ್ರಭಾವ ಬೀರುತ್ತೆ ಎಂದರು.