ದಾವಣಗೆರೆ:ರಾಜ್ಯಬಿಜೆಪಿ ಸರ್ಕಾರ ಗೋಹತ್ಯೆಯನ್ನು ನಿಷೇಧ ಮಾಡಿದೆ. ಮೀರ್ ಸಾದಿಕ್ಗಳು ಹೆಚ್ಚಾಗುತ್ತಿದ್ದಾರೆ. ಗೋಮಾಂಸವನ್ನು ನಾವು ಇಂದು ತಿನ್ನಲ್ಲ. ನಾಳೆಯಿಂದ ತಿನ್ನುತ್ತೇವೆ, ಏನ್ ಮಾಡ್ತೀರೋ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ನಗರದಲ್ಲಿಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಮೃತ ಮಹೋತ್ಸವದ ಅಲ್ಪಸಂಖ್ಯಾತ ವಿಭಾಗದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಟಿಪ್ಪು ಜಯಂತಿ ಬ್ಯಾನ್ ಮಾಡಿ ಎಂದಾಗ ಬಿಜೆಪಿಯವರ ವಿರುದ್ಧ ನಿಂತವರು ಸಿದ್ದರಾಮಯ್ಯ. ನೀವು ಏನ್ ಮಾಡ್ತೀರಾ ಮಾಡಿಕೊಳ್ಳಿ ನಾನು ಟಿಪ್ಪು ಜಯಂತಿ ಮಾಡ್ತೀನಿ ಎಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಮ್ಮ ಸಿದ್ದರಾಮಯ್ಯ ಆಚರಿಸಿದರು. ಸಿದ್ದರಾಮಯ್ಯ ಏಕ್ ಶೇರ್ ಹೈ. (ಸಿದ್ದರಾಮಯ್ಯ ಒಂದು ಸಿಂಹ ಇದ್ದಂತೆ). ಹೀಗಾಗಿ ನಮಾಜ್ ಬಳಿಕ ಸಿದ್ದರಾಮಯ್ಯನವರಿಗೆ ಅಧಿಕಾರ ಸಿಗಲಿ ಎಂದು ದುವಾ ಮಾಡಿ, ಮುಸ್ಲಿಮರು ತಲೆ ತಗ್ಗಿಸಿ ನಡೆಯಬಾರದು. ತಲೆ ಎತ್ತಿ ನಡೆಯಬೇಕೆಂದು ಕರೆ ನೀಡಿದರು.
ಸಚಿವ ಸ್ಥಾನ ನೀಡಿದ್ದೇ ಆಶ್ಚರ್ಯ:2008ರಲ್ಲಿ ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್ಗೆ ಬಂದಿದ್ದೆ. ಆಗ ನನಗೆ ಕಾಂಗ್ರೆಸ್ನಲ್ಲಿ ಸಚಿವ ಸ್ಥಾನ ನೀಡಿದ್ದು ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿತು. ಕಾಂಗ್ರೆಸ್ನಲ್ಲಿ ನನಗಿಂತ ಹಿರಿಯರಾದ ತನ್ವೀರ್ ಸೇಠ್, ಹ್ಯಾರಿಸ್ನಂತಹವರು ಇದ್ದರೂ ನನ್ನನ್ನು ಮಂತ್ರಿ ಮಾಡಿದರು. ಆಗ ರಣದೀಪ್ ಸುರ್ಜೇವಾಲಾ ಕರೆ ಮಾಡಿ ಮಾತನಾಡಿದ್ದರು. ಅವರಿಗೆ ಕರೆ ಮಾಡಿದ್ದು, ನನ್ನ ಬಳಿ ಹಣ ಇದೆ ಅಂತಲ್ಲ. ನನ್ನ ಹಿಂದೆ ಮುಸ್ಲಿಂ ಸಮಾಜ ಇದೆ ಎಂದು ಕರೆ ಮಾಡಿದ್ದರು ಅಂತಾ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ರು.