ದಾವಣಗೆರೆ: ಮನಾಲಿಯ ಮಾನಸಿಕ ಸಾಂತ್ವನ ಕೇಂದ್ರದಲ್ಲಿದ್ದಾರೆ ಎನ್ನಲಾದ ದಾವಣಗೆರೆ ಜಿಲ್ಲೆ ಉಕ್ಕಡಗಾತ್ರಿ ಮೂಲದ ಮಹಿಳೆ ಸುಶೀಲಮ್ಮ ಅವರನ್ನು ವಾಪಸ್ ತವರಿಗೆ ಕರೆತರಲು ಈಟಿವಿ ಭಾರತ್ ಹಾಕಿದ ಪರಿಶ್ರಮ ಕೊನೆಗೂ ಫಲಿಸಿದೆ.
ಮನಾಲಿಯಲ್ಲಿರುವ ಕನ್ನಡತಿಯನ್ನು ಇಂದು ಭೇಟಿಯಾಗಲಿರುವ ಅಧಿಕಾರಿ... ಈಟಿವಿ ಭಾರತ್ ಇಂಪ್ಯಾಕ್ಟ್ - ಉಕ್ಕಡಗಾತ್ರಿ
ಮನಾಲಿಯ ಮಾನಸಿಕ ಸಾಂತ್ವನ ಕೇಂದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ದಾವಣಗೆರೆ ಮೂಲದವರು ಎನ್ನಲಾದ ಸುಶೀಲಮ್ಮ ಅವರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಮಹಿಳೆಯ ಕುರಿತು ಮಾಹಿತಿ ಕಲೆಹಾಕಲು ಅಧಿಕಾರಿಯೊಬ್ಬರನ್ನು ಮನಾಲಿಗೆ ಕಳುಹಿಸಿದ್ದು, ವಾಪಸ್ ಕರೆತರಲು ಅಗತ್ಯವಿರುವ ಶಿಷ್ಟಾಚಾರಗಳ ಕುರಿತು ಪರಿಶೀಲನೆ ನಡೆಸುತ್ತಿದೆ.

ದಾವಣಗೆರೆ ಜಿಲ್ಲಾಧಿಕಾರಿ ಜಿಎನ್ ಶಿವಮೂರ್ತಿ
ವಿಜಯ್ ಕುಮಾರ್
ಈಗಾಗಲೇ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಶಿಧರ್ ಉಕ್ಕಡಗಾತ್ರಿಗೆ ಹೋಗಿ ಅಲ್ಲಿ ಮನೆ ಮನೆಗಳಲ್ಲಿಯೂ ವಿಚಾರಿಸಿದ್ದಾರೆ. ಆದರೆ ಉಕ್ಕಡಗಾತ್ರಿ ಅವರು ಎನ್ನುವುದಕ್ಕೆ ಯಾವ ಪುರಾವೆ ಸಿಕ್ಕಿಲ್ಲ. ಆದರೂ ಉಕ್ಕಡಗಾತ್ರಿ ಹೆಸರು ಹೇಳಿರುವುದರಿಂದ ಗಂಭೀರವಾಗಿ ಪರಿಗಣಿಸಲಾಗಿದೆ. ಜೊತೆಗೆ ಜಿಲ್ಲಾಧಿಕಾರಿ ಅವರು ಸುಶೀಲಮ್ಮರನ್ನ ಕರೆತರಲು ವಿಶೇಷ ಮುತುವರ್ಜಿ ವಹಿಸಿದ್ದಾರೆ. ಆದಷ್ಟು ಬೇಗ ದಾವಣಗೆರೆಗೆ ಕರೆದುಕೊಂಡು ಬಂದು ಆಕೆಗೆ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದ್ದಾರೆ.
Last Updated : Mar 11, 2019, 3:35 PM IST