ಕರ್ನಾಟಕ

karnataka

ETV Bharat / state

ಬಿಜೆಪಿ ಪರ ಜೆಡಿಎಸ್‌ನವರು ಮಾತಾಡ್ತಿರೋದು ಸಂತೋಷ : ಸಚಿವ ಬೈರತಿ ಬಸವರಾಜ್

ರೈತರು ಕೈಗೊಂಡಿರುವ ಪ್ರತಿಭಟನೆಯಲ್ಲಿ ಬಗ್ಗೆ‌ ಮಾತನಾಡಿದ ಅವರು, ರೈತ‌ ಮುಖಂಡರು ಸಿಎಂ ಯಡಿಯೂರಪ್ಪನವರ ಬಳಿ ಸುದೀರ್ಘವಾಗಿ ಚರ್ಚೆ ಮಾಡಿದ್ರೆ ಪರಿಹಾರ ಕಂಡುಕೊಳ್ಳ ಬಹುದಿತ್ತು. ಆದ್ರೇ, ಚರ್ಚೆ ಮಾಡದೆ ಸುಮ್ಮನೆ ಪ್ರತಿಭಟನೆ‌ ಮಾಡಿದ್ರೆ ಏನೂ ಉಪಯೋಗವಿಲ್ಲ..

Minister Bhairati Basavaraj
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್

By

Published : Dec 10, 2020, 8:19 PM IST

ದಾವಣಗೆರೆ :ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಅದನ್ನು ಎಲ್ಲರೂ ಸ್ವಾಗತ‌ ಮಾಡಿದ್ದಾರೆ. ನಿಜಕ್ಕೂ ನಮಗೆ ಹೆಮ್ಮೆಯಾಗುತ್ತಿದೆ ಎಂದು ಸಚಿವ ಬೈರತಿ ಬಸವರಾಜ್ ಹೇಳಿದರು.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿರುವುದು ನಮ್ಮ ಹೆಮ್ಮೆ : ಸಚಿವ ಬೈರತಿ ಬಸವರಾಜ್

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ‌ ಅವರು, ಮಸೂದೆಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಸಭಾತ್ಯಾಗ ಮಾಡಿದ್ರು. ಆದರೂ ಕೂಡ ನಾವು ಮಸೂದೆಯನ್ನು ಜಾರಿಗೊಳಿಸಿದ್ದೇವೆ. ಈ ಮಸೂದೆ ಸುಟ್ಟಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಸೂದೆಯನ್ನು ಸುಟ್ಟಿರುವುದಕ್ಕೆ ಅವರು ಏನು ಎಂಬುದನ್ನು‌ ಜನ ತೀರ್ಮಾನ ಮಾಡುತ್ತಾರೆ ಎಂದರು.

ರೈತರು ಕೈಗೊಂಡಿರುವ ಪ್ರತಿಭಟನೆಯಲ್ಲಿ ಬಗ್ಗೆ‌ ಮಾತನಾಡಿದ ಅವರು, ರೈತ‌ ಮುಖಂಡರು ಸಿಎಂ ಯಡಿಯೂರಪ್ಪನವರ ಬಳಿ ಸುದೀರ್ಘವಾಗಿ ಚರ್ಚೆ ಮಾಡಿದ್ರೆ ಪರಿಹಾರ ಕಂಡುಕೊಳ್ಳ ಬಹುದಿತ್ತು. ಆದ್ರೇ, ಚರ್ಚೆ ಮಾಡದೆ ಸುಮ್ಮನೆ ಪ್ರತಿಭಟನೆ‌ ಮಾಡಿದ್ರೆ ಏನೂ ಉಪಯೋಗವಿಲ್ಲ ಎಂದರು.

ಓದಿ:ಗೋ ಹತ್ಯೆ ನಿಷೇಧ.. ಕಾರ್ಯಕರ್ತರೊಂದಿಗೆ ಸಂಭ್ರಮಿಸಿದ ಸಚಿವ ಬೈರತಿ ಬಸವರಾಜ್‌

ಸಿದ್ದರಾಮಯ್ಯನವರು ಕಾಂಗ್ರೆಸ್ ಸರ್ಕಾರ ಬಂದರೆ ಕಾರ್ಮಿಕ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಹೇಳಿಕೆ‌ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿ, ಅವರ ಸರ್ಕಾರ ಮುಂದಿನ ದಿನಗಳಲ್ಲಿ ಬಂದ್ರೇ ತಾನೆ?, ಹತಾಶರಾಗಿ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಅವರ ಸರ್ಕಾರ ಮುಂದೇ ಅಧಿಕಾರಕ್ಕೆ‌ ಬಂದ್ರೇ ಆ ಮಾತನ್ನು ಹೇಳಲಿ ಎಂದು ಟಾಂಗ್ ನೀಡಿದರು.

ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ಕೆಸರೆರಚಾಟದ ಬಗ್ಗೆ ಮಾತನಾಡಿದ ಅವರು, ಇಬ್ಬರು ಕೆಸರೆರಚಾಟ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ‌ ಪರ ಜೆಡಿಎಸ್ ನಾಯಕರು ಮಾತನಾಡಿರುವುದನ್ನ ನಾನು ಸ್ವಾಗತಿಸುತ್ತೇನೆ, ಜೆಡಿಎಸ್‌ನವರು ಕಾಂಗ್ರೆಸ್‌ನವರೊಂದಿಗ ಹೋಗಿ ಕೈಸುಟ್ಟುಕೊಂಡಿದ್ದಾರೆ ಎಂದರು.

ABOUT THE AUTHOR

...view details