ದಾವಣಗೆರೆ :ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಜನವರಿ 15ರಿಂದ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಕಾಗಿನೆಲೆಯಿಂದ ಕೈಗೊಂಡಿರುವ ಪಾದಯಾತ್ರೆ ದಾವಣಗೆರೆಯ ಹರಿಹರ ನಗರ ಬಳಿಯ ತುಂಗಭದ್ರ ನದಿ ಬಳಿ ಬಂದು ಸೇರಿದೆ.
ಈ ವೇಳೆ ಸ್ವಾಮೀಜಿ ಮಾತನಾಡಿ, ಪಾದಯಾತ್ರೆಗೆ ಸಾಗರೋಪಾದಿಯಲ್ಲಿ ಜನ ಸೇರುತ್ತಿದ್ದಾರೆ. ಜನರ ಬೆಂಬಲ ನೋಡಿ ತುಂಬಾ ಖುಷಿಯಾಗಿದೆ. ಶಾಂತಿಯುತವಾಗಿ ನಮ್ಮ ಹಕ್ಕು ಕೇಳುತ್ತಿದ್ದೇವೆ.