ಕರ್ನಾಟಕ

karnataka

ETV Bharat / state

ಭದ್ರಾ ಕಾಲುವೆ ನೀರು ಸಿಗದೆ ಒಣಗಿದ ಭತ್ತ : ನೀರಿಗಾಗಿ ಪಟ್ಟು ಹಿಡಿದು ರೈತರ ಪ್ರತಿಭಟನೆ

ಅಧಿಕಾರಿಗಳ ನಿರ್ಲಕ್ಷ್ಯತನದಿಂದ ದಾವಣಗೆರೆ ತಾಲೂಕಿನ ಕೊನೆ ಭಾಗದ ಕೆಲವು ರೈತರ ಜಮೀನುಗಳಿಗೆ ಭದ್ರಾ ಕಾಲುವೆಯಿಂದ ನೀರು ತಲುಪುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ನೂರಾರು ರೈತರು ರಸ್ತೆ ತಡೆ ನಡೆಸಿದರು.

ಕುಂದುವಾಡ ಕ್ರಾಸ್​ ಬಳಿಯ ಹೆದ್ದಾರಿ ತಡೆ ನಡೆಸಿದ ರೈತರು

By

Published : Apr 3, 2019, 4:56 PM IST

ದಾವಣಗೆರೆ: ತಾಲೂಕಿನ ಕೊನೆ ಭಾಗದ ಕೆಲವು ರೈತರ ಜಮೀನುಗಳಿಗೆ ಭದ್ರಾ ಕಾಲುವೆಯಿಂದ ನೀರು ತಲುಪುತ್ತಿಲ್ಲ ಎಂದು ಆರೋಪಿಸಿರುವ ಸ್ಥಳೀಯ ರೈತರು ನಗರದ ಕುಂದುವಾಡ ಕ್ರಾಸ್​ ಬಳಿ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.


ಕುಂದುವಾಡ ಕ್ರಾಸ್​ ಬಳಿಯ ಹೆದ್ದಾರಿ ತಡೆ ನಡೆಸಿದ ರೈತರು

ತಾಲೂಕಿನ ಕುಂದುವಾಡ, ಬಾತಿ, ಅವರಗೊಳ್ಳ, ಕಕ್ಕರಗೊಳ್ಳ, ಸತ್ಯನಾರಾಯಣ ಕ್ಯಾಂಪ್, ಬನ್ನಿಕೋಡು, ಬೇವಿನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಭದ್ರಾ ಜಲಾಶಯ ನೀರು ತಲುಪುತ್ತಿಲ್ಲ.‌ ಎರಡು ತಿಂಗಳಿಂದ ಕಷ್ಟಪಟ್ಟು ಭತ್ತ ಬೆಳೆಯುತ್ತಿದ್ದು ಭದ್ರಾ ಕಾಲುವೆಯಿಂದ ನೀರು ಬರದೇ ಭತ್ತ ನೆಲಕಚ್ಚುತ್ತಿದೆ. ಇದರಿಂದ ರೈತರು ಕಣ್ಣೀರು ಸುರಿಸುತ್ತಿದ್ದಾರೆ.

ಹೆದ್ದಾರಿ ತಡೆದಿದ್ದರಿಂದ ಉಂಟಾದ ಟ್ರಾಫಿಕ್​ ಜಾಮ್​

ಈವರೆಗೆ ಭತ್ತ ನಾಟಿ ಕಾರ್ಯ ನಡೆದಿದ್ದು ಸುಮಾರು ಎರಡ್ಮೂರು ತಿಂಗಳು ಭತ್ತವನ್ನು ಕಾಪಾಡಿಕೊಂಡು ಬಂದಿದ್ದಾರೆ.‌ ಆದರೆ, ಈಗ ಭತ್ತಕ್ಕೆ ನೀರು ಅನಿವಾರ್ಯ. ನೀರು ಸಿಗದಿದ್ದರೆ ಶೇ. 50ರಷ್ಟು ಭತ್ತ ಹಾಳಾಗುವ ಸಾಧ್ಯತೆ ಇದೆ.‌ ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ಕುಂದುವಾಡ ಕ್ರಾಸ್​ ಬಳಿಯ ಹೆದ್ದಾರಿ ತಡೆ ನಡೆಸಿದ ರೈತರು

ABOUT THE AUTHOR

...view details