ದಾವಣಗೆರೆ :ಎರಡನೇ ಹಂತದ ಗ್ರಾಪಂ ಚುನಾವಣಾ ಮತದಾನ ಆರಂಭವಾಗಿದ್ದು, ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ ಮತದಾರರ ಪಟ್ಟಿ ಅದಲು-ಬದಲಾಗಿರುವ ಘಟನೆ ನಡೆದಿದೆ.
ಮತಗಟ್ಟೆ 53 ಹಾಗೂ 53Aಯಲ್ಲಿ ಮತದಾರರ ಪಟ್ಟಿಯಲ್ಲಿ ದೋಷ ಕಂಡು ಬಂದಿದ್ದು, ಮತದಾರ ಸಂಖ್ಯೆಗಳು ಕೂಡ ಅದಲು-ಬದಲಾಗಿವೆ. ಇದರಿಂದ ಕೋಪಗೊಂಡು ಮತದಾರರು ಹಾಗೂ ಅಭ್ಯರ್ಥಿಗಳು ಮತಗಟ್ಟೆ 53ರಲ್ಲಿ ಬಂದು ಗಲಾಟೆ ಮಾಡಿದರು.
ಮತಗಟ್ಟೆಯಲ್ಲಿ ಮತದಾರರ ಪಟ್ಟಿ ಅದಲು-ಬದಲು ಈ ವೇಳೆ ಮಹಿಳಾ ಪೊಲೀಸರು ಮತಗಟ್ಟೆಯೊಳಗೆ ಬರದಂತೆ ಮತದಾರರನ್ನು ತಡೆದರು. ಆಗ ಪೊಲೀಸರ ಹಾಗೂ ಅಭ್ಯರ್ಥಿಗಳ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ ಅಧಿಕಾರಿಗಳು ಮತದಾರರ ಪಟ್ಟಿಯಲ್ಲಿ ಆಗಿರುವ ದೋಷ ಸರಿಪಡಿಸುವಂತೆ ತಹಶೀಲ್ದಾರ್ಗೆ ದೂರವಾಣಿ ಮೂಲಕ ಮಾತನಾಡಿ ಮನವಿ ಮಾಡಿದರು.
ಬಳಿಕ ಸ್ವಲ್ಪ ಸಮಯದಲ್ಲೇ ಮತದಾರರ ಪಟ್ಟಿಯನ್ನು ಸರಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಯಿತು.