ದಾವಣಗೆರೆ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳು ತುಂಬಿವೆ. ದಶಕಗಳ ಬಳಿಕ ಜಗಳೂರು ತಾಲೂಕಿನ ತುಪ್ಪದಹಳ್ಳಿ ಗ್ರಾಮದ ಕೆರೆಯೂ ಭರ್ತಿಯಾಗಿದೆ. ಉಕ್ಕಿ ಹರಿಯುತ್ತಿರುವ ಈ ಕೆರೆಯಲ್ಲಿ ಮೀನು ಹಿಡಿಯುವ ದುಸ್ಸಾಹಸಕ್ಕೆ ಗ್ರಾಮಸ್ಥರು ಕೈಹಾಕಿದ್ದಾರೆ.
ದಾವಣಗೆರೆ: ಭರಪೂರ ಮಳೆಗೆ ತುಂಬಿದ ತುಪ್ಪದಹಳ್ಳಿ ಕೆರೆ, ಗ್ರಾಮಸ್ಥರಿಂದ ಮೀನುಗಾರಿಕೆ
ಧಾರಾಕಾರ ಮಳೆಗೆ ಭರ್ತಿಯಾಗಿರುವ ಕೆರೆಗಳಲ್ಲಿ ಜನರು ತಮ್ಮ ಜೀವ ಲೆಕ್ಕಿಸದೆ ಮೀನು ಹಿಡಿಯುತ್ತಿದ್ದಾರೆ.
ಭರ್ತಿಯಾದ ತುಪ್ಪದಹಳ್ಳಿ ಕೆರೆಯಲ್ಲಿ ಮೀನು ಹಿಡಿದ ಗ್ರಾಮಸ್ಥರು
ಮಳೆ ನೀರು ಹೊರತುಪಡಿಸಿ, ತುಂಗಭದ್ರಾ ನದಿಯಿಂದಲೂ ಕೂಡ ಕೆರೆಗಳಿಗೆ ನೀರು ಹರಿಸಲಾಗಿದೆ. ತುಪ್ಪದಹಳ್ಳಿ ಗ್ರಾಮದ ಕೆರೆ ಸೇರಿದಂತೆ ಬಹುತೇಕ ಕೆರೆಗಳು ತುಂಬಿವೆ. ಹೊನ್ನಾಳಿ, ಹರಿಹರ, ದಾವಣಗೆರೆ, ಜಗಳೂರು, ನ್ಯಾಮತಿ, ಚನ್ನಗಿರಿ ತಾಲೂಕಿನ ಕೆರೆಗಳು ಕೋಡಿ ಬೀಳುವ ಹಂತ ತಲುಪಿವೆ. ಈಗಾಗಲೇ ಕೋಡಿ ಬಿದ್ದು ತುಂಬಿ ಹರಿಯುವ ನೀರಿನಲ್ಲಿ ಜನರು ಪ್ರಾಣದ ಹಂಗು ತೊರೆದು ಮೀನು ಹಿಡಿಯುತ್ತಿದ್ದಾರೆ. ಈ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ:ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ: ರಾಘವೇಂದ್ರ ಸ್ವಾಮಿ ಜಪದಕಟ್ಟೆ ಜಲಾವೃತ